Russia, China

ಚೀನಾಗೆ ಭಾರತದ ಪೆಟ್ಟಿನ ಬಳಿಕ ಇದೀಗ ಟಿಕ್ ಟಾಕ್ ಕುರಿತು ತನಿಖೆ ಆರಂಭಿಸಿದ ಅಮೆರಿಕಾ!
ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್ ಗಳನ್ನು ಭಾರತ ನಿಷೇಧ ಮಾಡಿದ ಬೆನ್ನಲ್ಲೇ ಇದೀಗ ಅಮೆರಿಕಾ ಮತ್ತು ಜಪಾನ್ ಟಿಕ್ ಟಾಕ್ ಕುರಿತು ತನಿಖೆ ಆರಂಭಿಸಿದೆ.

ಭಾರತ-ಚೀನಾ ಸಂಘರ್ಷ: ಹಿಂದೂ ಮಹಾಸಾಗರದಲ್ಲಿ ಹೆಚ್ಚುವರಿ ಯುದ್ಧನೌಕೆ, ಜಲಾಂತರ್ಗಾಮಿ ನೌಕೆ ನಿಯೋಜನೆ!
ಪೂರ್ವ ಲಡಾಖ್ ನಲ್ಲಿ ಉಪಟಳ ನೀಡುತ್ತಿರುವ ಚೀನಾಕ್ಕೆ ಸ್ಪಷ್ಟ ಸಂದೇಶ ಕಳುಹಿಸಲುಭಾರತೀಯ ನೌಕಾಪಡೆ ಹಿಂದೂ ಮಹಾಸಾಗರ ಪ್ರದೇಶದಲ್ಲಿ(ಐಒಆರ್) ಹೆಚ್ಚಿನ ಸಂಖ್ಯೆಯ ಮುಂಚೂಣಿ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನಿಯೋಜಿಸಿದೆ ಎಂದು ಉನ್ನತ ರಕ್ಷಣಾ ಮೂಲಗಳು ಬುಧವಾರ ತಿಳಿಸಿವೆ.

ಗಡಿ ಪ್ರಕ್ಷುಬ್ಧತೆ ನಡುವೆಯೂ ಭಾರತದಿಂದ ಚೀನಾಗೆ ಪಿವಿಸಿ ರಫ್ತು ಸಾರ್ವಕಾಲಿಕ ಅಧಿಕ!
ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದರ ಪರಿಣಾಮ ಚೀನಾದೊಂದಿಗಿನ ವ್ಯಾಪಾರ ವಹಿವಾಟುಗಳನ್ನು ಕಡಿಮೆ ಮಾಡುವ ಕರೆಗಳ ನಡುವೆಯೂ ಭಾರತದಿಂದ ಚೀನಾಗೆ ರಫ್ತಾಗುತ್ತಿದ್ದ ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ)ಗಳ ಪ್ರಮಾಣ ದಾಖಲೆಯ ಏರಿಕೆ ಕಂಡಿದೆ.

ಲಡಾಖ್ ಗಡಿಯಿಂದ ಎರಡೂ ಸೇನೆಗಳು ಸಂಪೂರ್ಣ ಹಿಂದೆ ಸರಿದಿವೆ: ಚೀನಾ
ಲಡಾಖ್ ಗಡಿಯ ಬಹುತೇಕ ನೆಲೆಗಳಿಂದ ಭಾರತ ಮತ್ತು ಚೀನಾ ಎರಡೂ ದೇಶಗಳ ಸೇನಾಪಡೆಗಳು ಸಂಪೂರ್ಣ ಹಿಂದೆ ಸರಿದಿವೆ ಎಂದು ಚೀನಾದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ. ಅಲ್ಲದೆ ಗಡಿಯಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಹೇಳಿದ್ದಾರೆ.

ಕೋವಿಡ್ 19 ಮುಚ್ಚಿಡಲಾಗಿದೆ, ಸಾಕ್ಷ್ಯವೇ ಸಿಗದಂತೆ ವುಹಾನ್ ಮಾರ್ಕೆಟ್ ಸ್ವಚ್ಛ ಮಾಡಲಾಗಿತ್ತು: ಚೀನಾ ವೈದ್ಯ ಆರೋಪ!
ಚೀನಾದಲ್ಲಿ ಆರಂಭಿಕ ಕೊರೋನಾವೈರಸ್ ಪ್ರಕರಣಗಳನ್ನು ಚೀನಾದ ವೈದ್ಯರು ಪತ್ತೆ ಹಚ್ಚಲಾಗಿತ್ತು. ಆದರೆ ವುಹಾನ್ ನಲ್ಲಿ ಸ್ಫೋಟಗೊಂಡಿದ್ದ ಕೊರೋನಾ ಮಹಾಮಾರಿಯನ್ನು ಸ್ಥಳೀಯ ಅಧಿಕಾರಿಗಳು ಮುಚ್ಚಿಹಾಕಿದ್ದರು ಎಂದು ಆರೋಪಿಸಿದ್ದು ತನಿಖೆಗೆ ಹೋದಾಗ ಸಾಕ್ಷ್ಯಗಳು ಅದಾಗಲೇ ನಾಶವಾಗಿವೆ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚೀನಾದ ಮೇಲೆ ಭಾರತದ ಎರಡನೇ ಡಿಜಿಟಲ್ ಸ್ಟ್ರೈಕ್: ಮತ್ತೆ 47 ಆ್ಯಪ್ ನಿಷೇಧ!
ಚೀನಾದ ಮೇಲೆ ಭಾರತ ಎರಡನೇ ಬಾರಿಗೆ ಡಿಜಿಟಲ್ ಸ್ಟ್ರೈಕ್ ನಡೆಸಿದ್ದು, ಮತ್ತೆ 47 ಆ್ಯಪ್ ನಿಷೇಧ ಮಾಡಿದೆ.

ಚೆಂಗ್ಡೂ ಅಮೆರಿಕ ದೂತಾವಾಸ ಚೀನಾ ಅಧಿಕಾರಿಗಳ ವಶಕ್ಕೆ, ಅಮೆರಿಕ ಧ್ವಜ ಇಳಿಸಿದ ಅಧಿಕಾರಿಗಳು!
ಚೀನಾದ ಚೆಂಗ್ಡೂ ನಗರದಲ್ಲಿರುವ ಅಮೆರಿಕ ಧೂತವಾಸ ಕಚೇರಿಯನ್ನು ಚೀನಾ ಸರ್ಕಾರ ವಶಕ್ಕೆ ಪಡೆದಿದ್ದು, ಕಟ್ಟಡದ ಮೇಲಿದ್ದ ಅಮೆರಿಕ ಧ್ವಜವನ್ನು ಅಧಿಕಾರಿಗಳು ಕೆಳಗೆ ಇಳಿಸಿದ್ದಾರೆ.

ಪೂರ್ವ ಲಡಾಖ್ನಿಂದ ಸೈನ್ಯವನ್ನು 'ತ್ವರಿತ ಮತ್ತು ಸಂಪೂರ್ಣ' ಹಿಂತೆಗೆತಕ್ಕೆ ಭಾರತ, ಚೀನಾ ಒಪ್ಪಿಗೆ
ಪೂರ್ವ ಲಡಾಖ್ನ ಘರ್ಷಣೆಯ ಸ್ಥಳಗಳಿಂದ ಸೈನ್ಯವನ್ನು "ತ್ವರಿತ ಮತ್ತು ಸಂಪೂರ್ಣ" ವಿಸರ್ಜನೆಗೆ ಭಾರತ ಮತ್ತು ಚೀನಾ ಶುಕ್ರವಾರ ಒಪ್ಪಿಗೆ ಸೂಚಿಸಿದ್ದು, ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಅಭಿವೃದ್ಧಿಗೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆ ಅಗತ್ಯವಾಗಿದೆ.

ಚಿನಿವಾರ ಪೇಟೆಗೂ ತಟ್ಟಿದ ಅಮೆರಿಕಾ-ಚೀನಾ ಬಿಕ್ಕಟ್ಟು ಬಿಸಿ: 51 ಸಾವಿರ ಗಡಿ ದಾಟಿದ ಚಿನ್ನ
ದಿನೇ ದಿನೇ ಗಗನಮುಖಿ ಆಗುತ್ತಿರುವ ಚಿನ್ನದ ದರ ಮತ್ತೊಮ್ಮೆ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಗ್ರಾಂ ಚಿನ್ನಕ್ಕೆ ರೂ 4,961 ದಾಖಲಾಗಿದೆ.

