Winter Session

ಬೆಳಗಾವಿಯಲ್ಲಿ ಇಂದು ಚಳಿಗಾಲ ಅಧಿವೇಶನ ಆರಂಭ: ಬಿಟ್ ಕಾಯಿನ್, ಪ್ರವಾಹ ಪರಿಸ್ಥಿತಿ ವಿರೋಧ ಪಕ್ಷಕ್ಕೆ ಅಸ್ತ್ರ, ರೈತರಿಂದ ಪ್ರತಿಭಟನೆ ಬಿಸಿ
10 ದಿನಗಳ ವಿಧಾನ ಮಂಡಲ ಚಳಿಗಾಲ ಅಧಿವೇಶನ ಇಂದು ಸೋಮವಾರ(ಡಿಸೆಂಬರ್ 13) ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಆರಂಭವಾಗುತ್ತಿದೆ.

2 ಗಂಟೆಯಲ್ಲೇ ಓಮಿಕ್ರಾನ್ ಪತ್ತೆಗೆ ಕಿಟ್ ಅವಿಷ್ಕಾರ; ಅಸ್ಸಾಂ ವಿಜ್ಞಾನಿಗಳ ಆವಿಷ್ಕಾರ
ವಿಶ್ವದ ಹಲವೆಡೆ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಭಾರಿ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಈ ಸೋಂಕು ತಗುಲಿರುವುದನ್ನು ಕೇವಲ ೨ ಗಂಟೆಗಳಲ್ಲಿ ಪತ್ತೆ ಮಾಡುವ ಕಿಟ್ವೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಎಂಸಿಆರ್) ಅಭಿವೃದ್ಧಿಪಡಿಸಿದೆ.

ಬೆಳಗಾವಿ ವಿಧಾನಮಂಡಲ ಅಧಿವೇಶನ; ಬಂದವರ ಭೋಜನಕ್ಕೆ ತಯಾರಿ
ಬೆಳಗಾವಿ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಗಳಿಂದ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಮತ್ತು ಮಾಧ್ಯಮ ಪ್ರತಿನಿಧಿಗಳ ದಂಡೇ ಕುಂದಾನಗರಿಗೆ ಹರಿದು ಬರುತ್ತಿದೆ. ಬಂದವರ ಉದರದ ಹಸಿವು ತಣಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಯಾವುದೇ ಗೊಂದಲ ಇಲ್ಲ, ನಿಗದಿಯಂತೆ ಬೆಳಗಾವಿಯಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ: ಸಿಎಂ ಬೊಮ್ಮಾಯಿ
ಓಮಿಕ್ರಾನ್ ಸೋಂಕಿನ ಆತಂಕ ನಡುವೆ ವಿಧಾನ ಮಂಡಲದ ಚಳಿಗಾಲ ಅಧಿವೇಶನ ನಡೆಸುವ ಬಗ್ಗೆ ಇದ್ದ ಗೊಂದಲಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೆರೆ ಎಳೆದಿದ್ದಾರೆ.

ಬೆಳಗಾವಿ ಸುರಕ್ಷಿತವಾಗಿದ್ದು, ನಿಗದಿತ ವೇಳಾಪಟ್ಟಿಯಂತೆಯೇ ಅಧಿವೇಶನ ನಡೆಸಲಾಗುತ್ತದೆ: ರಾಜ್ಯ ಸರ್ಕಾರ ಸ್ಪಷ್ಟನೆ
ಬೆಂಗಳೂರಿನಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾದ ಬಳಿಕ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಈ ನಡುವೆ ಚಳಿಗಾಲ ಅಧಿವೇಶನ ಕುರಿತ ಊಹಾಪೋಹಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ.

ಚಳಿಗಾಲ ಅಧಿವೇಶನ: 12 ಸಂಸದರ ಅಮಾನತು ಹಿಂಪಡೆಯುವಂತೆ ಆಗ್ರಹ, ವಿಪಕ್ಷ ನಾಯಕರಿಂದ ಪ್ರತಿಭಟನೆ
12 ರಾಜ್ಯಸಭಾ ಸದಸ್ಯರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರು ಸಂಸತ್ತಿನ ಆವರಣದಲ್ಲಿರುವ ಗಾಂಧಿ ಪ್ರತಿಮೆ ಎದುರು ಬುಧವಾರ ಪ್ರತಿಭಟನೆ ಆರಂಭಿಸಿದ್ದಾರೆ.
ಪರಿಷತ್ ಚುನಾವಣೆ: ಬಿಜೆಪಿ-ಜೆಡಿಎಸ್ ಮೈತ್ರಿ ಗ್ಯಾರಂಟಿ!: ಪ್ರಧಾನಿ ಮೋದಿ ಜೊತೆ ಸಭೆ ಬಳಿಕ ದೇವೇಗೌಡ ಹೇಳಿದ್ದೇನು?
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು, ಪ್ರಧಾನಿ ಮೋದಿಯವರ ಬಳಿ ಚರ್ಚಿಸಲಾಗಿದೆ ಎಂದು ಜೆಡಿಎಸ್ ಪರಮೋಚ್ಚ ನಾಯಕ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಚಳಿಗಾಲದ ಅಧಿವೇಶನ: ಪ್ರಧಾನಿ ಮೋದಿ-ಮಾಜಿ ಪ್ರಧಾನಿ ದೇವೇಗೌಡ ಮಹತ್ವದ ಭೇಟಿ
ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಈ ಮಧ್ಯೆ ಇಂದು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವು ದೇವೇಗೌಡರ ಕೈ ಹಿಡಿದು ಕರೆತಂದು ಕುರ್ಚಿಯಲ್ಲಿ ಕೂರಿಸಿದ್ದಾರೆ.

ಪ್ರತಿಪಕ್ಷಗಳ 12 ಸಂಸದರ ಅಮಾನತು: ಯಾಕೆ ಕ್ಷಮೆ ಕೇಳುಬೇಕು. ಇಲ್ಲ, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ರಾಹುಲ್ ಗಾಂಧಿ
ರಾಜ್ಯಸಭೆಯಿಂದ ಅಮಾನತುಗೊಂಡಿರುವ ಪ್ರತಿಪಕ್ಷಗಳ 12 ಸಂಸದರು ಯಾಕೆ ಕ್ಷಮೆಯಚಿಸಬೇಕು ಎಂದು ಮಂಗಳವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

