Watch | ಗದ್ದಲದಲ್ಲೇ ತೆರೆ: ಲೋಕಸಭೆ ಶೇ 19, ರಾಜ್ಯಸಭೆ ಶೇ 39ರಷ್ಟು ಕಲಾಪ ಫಲಪ್ರದ

ಸಂಸತ್ತಿನ ಮುಂಗಾರು ಅಧಿವೇಶನದ ಕಲಾಪದ ವೇಳೆ ಲೋಕಸಭೆಯಲ್ಲಿ ಉತ್ಪಾದಕತೆ ಶೇ 19 ರಷ್ಟಿದ್ದರೆ, ರಾಜ್ಯಸಭೆಯಲ್ಲಿ ಶೇ 39 ರಷ್ಟಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ಅಧಿವೇಶನದ ಸಮಯದಲ್ಲಿ ಕಲಾಪಗಳಿಗೆ ಅಡ್ಡಿಪಡಿಸಿದ್ದಕ್ಕೆ ಕಾಂಗ್ರೆಸ್ ಅನ್ನು ದೂಷಿಸಿದ ಅವರು, ಕಡಿಮೆ ಮಟ್ಟದ ಚರ್ಚೆಯಾಗಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ.

ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ರಿಜಿಜು ಮಾತನಾಡಿದರು.

ಸಂಸತ್ತಿನ ಅಧಿವೇಶನ 'ತುಂಬಾ ಕಳಪೆ ಉತ್ಪಾದಕತೆ'ಯನ್ನು ಕಂಡಿದೆ ಮತ್ತು ಸರ್ಕಾರವು ಚರ್ಚೆಗೆ ಇಚ್ಛಿಸಿದ್ದರೂ, ವಿರೋಧ ಪಕ್ಷಗಳು ಪದೇ ಪದೆ ಚರ್ಚೆಗಳನ್ನು ತಪ್ಪಿಸಿವೆ ಎಂದು ಆರೋಪಿಸಿದರು. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com