ವಿಡಿಯೋ
ಮುಂಬೈನ ಕುರ್ಲಾ ಪೂರ್ವದಲ್ಲಿ ಶುಕ್ರವಾರ ಬೆಳಗಿನ ಜಾವ ನೆಲಸಮ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಕ್ರೇನ್ ಮನೆಗಳ ಮೇಲೆ ಉರುಳಿ ಬಿದ್ದಿದೆ.
ಇದರ ಪರಿಣಾಮ 3 ತಿಂಗಳ ಮಗು ಸೇರಿದಂತೆ ಹತ್ತು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದಿರಾ ನಗರದಲ್ಲಿ 17 ಅಂತಸ್ತಿನ ಕಟ್ಟಡ ನಿರ್ಮಾಣದ ಸ್ಥಳದ ಬಳಿ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಸ್ಥಳಕ್ಕೆ ತರಲಾಗಿದ್ದ ಪೋಕ್ಲೇನ್ ಯಂತ್ರವನ್ನು ಎತ್ತಲು ಹೈಡ್ರಾಲಿಕ್ ಕ್ರೇನ್ ಅನ್ನು ಬಳಸಲಾಗುತ್ತಿತ್ತು ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿ ತಿಳಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.