ಮನರಂಜನೆ

ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಟೀಸರ್

ಭಾರತದಲ್ಲಿ ಇದೀಗ ಕ್ರಿಕೆಟ್ ಜ್ವರ ಶುರುವಾಗಿದೆ. ಈ ಮಧ್ಯೆ ಟೀಂ ಇಂಡಿಯಾದ ಸಕ್ಸಸ್ ನಾಯಕರಲ್ಲೊಬ್ಬರಾದ ಎಂಎಸ್ ಧೋನಿ ಕುರಿತಂತೆ ಚಿತ್ರವೊಂದು ತಯಾರಾಗಿದ್ದು, ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧೋನಿ ಪಾತ್ರಧಾರಿಯಾಗಿ ಸುಶಾಂತ್ ಸಿಂಗ್ ರಜಪೂತ್ ನಟಿಸಿದ್ದು, ಆಗ್ನೇಯ ಭಾರತೀಯ ರೈಲ್ವೆಯ ಟಿಸಿಯಾಗಿ ಮೊದಲ ದಿನ ಕೆಲಸಕ್ಕೆ ಹಾಜರಾಗುವ ಚಿತ್ರಣವನ್ನು ಟೀಸರ್ ನಲ್ಲಿ ತೋರಿಸಲಾಗಿದೆ.

ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ ಚಿತ್ರದ ಟೀಸರ್
ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ 'ಈ ಸಂಜೆ' ಸಾಂಗ್

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ 'ಈ ಸಂಜೆ' ಸಾಂಗ್

ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಮೂಡಿಸಿರುವ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಹಾಡೊಂದು ರೆಡಿಯಾಗಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಧಾರಿಗಳು. ಕನ್ನಡದ ಮಟ್ಟಿಗೆ ಸ್ವಲ್ಪ ಹೊಸತೆ ಎನ್ನಬಹುದಾದ ಸಬ್ಜೆಕ್ಟ್ ಇರೋದೇ ಈ ಚಿತ್ರದ ವಿಶಿಷ್ಟತೆ. ಈ ಸಂಜೆಗೆ ಅನ್ನೋ ಹಾಡನ್ನು ಸ್ವತಃ ರಕ್ಷಿತ್ ಶೆಟ್ಟಿ ಬರೆದಿದ್ದಾರೆ. ಹೇಮಂತ್ ಎಂ.ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು 'ಆಲ್ ಜೈಮರ್ಸ್' ಎನ್ನುವ ಮರೆವಿನ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬನ ಸುತ್ತ ನಡೆಯುವ ಕಥೆ.

'ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಟ್ರೇಲರ್

'ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಟ್ರೇಲರ್

ತಮಿಳುನಾಡು ಮೂಲದ ನೊಬೆಲ್ ಪ್ರಶಸ್ತಿ ವಿಜೇತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜೀವನಾಧಾರಿತ ಸಿನೆಮಾ 'ದ ಮ್ಯಾನ್ ಹೂ ನ್ಯೂ ಇನ್ಫಿನಿಟಿ' ಚಿತ್ರದಲ್ಲಿ 'ಸ್ಲಂ ಡಾಗ್ ಮಿಲಿಯನೇರ್' ಖ್ಯಾತಿಯ ದೇವ್ ಪಟೇಲ್ ರಾಮಾನುಜನ್ ಪಾತ್ರದಲ್ಲಿ ನಟಿಸಿದ್ದಾರೆ. ರಾಬರ್ಟ್ ಕ್ಯಾನಿಗಲ್ ಬರೆದಿರುವ ಇದೇ ಹೆಸರಿನ ಪುಸ್ತಕ ಈ ಸಿನೆಮಾಗೆ ಆಧಾರವಾಗಿದ್ದು, ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ.

'ಪೊರ್ಕಿ ಹುಚ್ಚ ವೆಂಕಟ್' ಗೆ 'ಕೋಪ ಬಂದ್ರೆ'? ವಿಡಿಯೋ ಹಾಡು

'ಪೊರ್ಕಿ ಹುಚ್ಚ ವೆಂಕಟ್' ಗೆ 'ಕೋಪ ಬಂದ್ರೆ'? ವಿಡಿಯೋ ಹಾಡು

ಸದಾ ವಿವಾದದ ಕೇಂದ್ರವಾಗಿರುವ 'ಹುಚ್ಚ ವೆಂಕಟ್' ತಮ್ಮ ನೂತದ ಚಿತ್ರದ ಮೂಲಕ ಮತ್ತೆ ಬಂದಿದ್ದಾರೆ. 'ಪೊರ್ಕಿ ಹುಚ್ಚ ವೆಂಕಟ್' ಚಿತ್ರದ ಕೋಪ ಬಂದ್ರೆ ಹಾಡು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆಯುತ್ತಿದೆ. ಸತೀಶ್ ಬಾಬು ಸಂಗೀತ ನಿರ್ದೇಶನದ ಈ ಹಾಡನ್ನು ರಾಜೇಶ್ ಕೃಷ್ಣನ್ ಹಾಡಿದ್ದಾರೆ. ಹುಚ್ಚ ವೆಂಕಟೇಶ್ ಸ್ವತಃ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್

ನಾನು ಮತ್ತು ವರಲಕ್ಷ್ಮಿ' ಚಿತ್ರದ ಟ್ರೈಲರ್

ಸ್ಯಾಂಡಲ್ ವುಡ್ ನಲ್ಲಿ ಮೊದಲ ಬಾರಿಗೆ ಮೋಟರ್ ರೇಸಿಂಗ್ ಕಥಾವಸ್ತು ಹೊಂದಿರುವ ನಾನು ಮತ್ತು ವರಲಕ್ಷ್ಮೀ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದು, ಮಲೆಯಾಳಂ ಬೆಡಗಿ ಮಾಳವಿಕಾ ಮೋಹನನ್ ನಾಯಕಿಯಾಗಿದ್ದಾರೆ.