ಮನರಂಜನೆ

'ಅಕಿರ' ಕನ್ನಡ ಸಿನೆಮಾ ಟ್ರೇಲರ್

ಜಿ ನವೀನ್ ರೆಡ್ಡಿ ಬರೆದು ನಿರ್ದೇಶಿಸುತ್ತಿರುವ 'ಅಕಿರ' ಸಿನೆಮಾದ ಟ್ರೇಲರ್ ಈಗ ಲಭ್ಯವಿದೆ. ಅನೀಶ್, ಅದಿತಿ, ಕೃಷಿ, ಅವಿನಾಶ್ ನಟಿಸಿರುವ ಈ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ನೀಡಿದ್ದಾರೆ.

'ಅಕಿರ' ಕನ್ನಡ ಸಿನೆಮಾ ಟ್ರೇಲರ್
ಕಿ & ಕ ಟ್ರೇಲರ್

ಕಿ & ಕ ಟ್ರೇಲರ್

ಆರ್ ಭಾಲ್ಕಿ ನಿರ್ದೇಶನದ 'ಕಿ & ಕ' ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಜನಪ್ರಿಯವಾಗಿದ್ದು, ೨ ದಿನಗಳಲ್ಲಿ ೧೬ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಕರೀನಾ ಕಪೂರ್ ಮತ್ತು ಅರ್ಜುನ್ ಕಪೂರ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನೆಮಾಗೆ ಇಳಯರಾಜ ಮತ್ತು ಅಂಕಿತ್ ತಿವಾರಿ ಸಂಗೀತ ನೀಡಿದ್ದು ಮೂರ್ಖರ ದಿನವಾದ ಏಪ್ರಿಲ್ ೧ಕ್ಕೆ ಸಿನೆಮಾ ಬಿಡುಗಡೆಯಾಗಲಿದೆ.

ಜೆಸ್ಸಿ ಚಿತ್ರದ ಪ್ರೋಮೋ ಹೆಲ್ಮೆಟ್ ಸಾಂಗ್

ಜೆಸ್ಸಿ ಚಿತ್ರದ ಪ್ರೋಮೋ ಹೆಲ್ಮೆಟ್ ಸಾಂಗ್

ರಾಜ್ಯದಲ್ಲಿ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಮಾಡಿರುವ ಕುರಿತು ಪರ ವಿರೋಧ ಚರ್ಚೆಗಳು ಸಾಕಷ್ಟು ನಡೆಯುತ್ತಿವೆ. ಈ ಮಧ್ಯೆ ನಿರ್ದೇಶಕ ಪವನ್ ಒಡೆಯರ್ ಮತ್ತು ಸಂಗೀತ ನಿರ್ದೇಶಕ ಅನುಪ್ ಸೀಳಿನ್ ಹೆಲ್ಮೆಟ್ ಸಾಂಗ್ ಒಂದನ್ನು ರೆಡಿ ಮಾಡಿದ್ದಾರೆ. ಹೆಲ್ಮೆಟ್ ಬೇಕೋ ಬೇಡ್ವೋ ಎಂದು ಎರಡನ್ನು ಹೇಳುವ ಸಾಂಗ್ ಚೆನ್ನಾಗಿ ಮೂಡಿಬಂದಿದೆ.

ಬೋರ್ನ್ ಸರಣಿಯ 'ಜೇಸನ್ ಬೋರ್ನ್' ಮತ್ತೆ ಬರಲಿದ್ದಾನೆ- ಟ್ರೇಲರ್

ಬೋರ್ನ್ ಸರಣಿಯ 'ಜೇಸನ್ ಬೋರ್ನ್' ಮತ್ತೆ ಬರಲಿದ್ದಾನೆ- ಟ್ರೇಲರ್

ರಾಬರ್ಟ್ ಲಡ್ಲಮ್ ಕಾದಂಬರಿಗಳನ್ನಾಧರಿಸಿ ನಿರ್ಮಿಸಲಾಗಿದ್ದ ಬೋರ್ನ್ ಸರಣಿ ಸಿನೆಮಾಗಳು ಅತಿ ಜನಪ್ರಿಯ. ಈಗ ಆ ಸರಣಿಯ ಪಾತ್ರವನ್ನೇ ಮುಂದುವರೆಸಿದ 'ಜೇಸನ್ ಬೋರ್ನ್' ಸಿನೆಮಾ ಮತ್ತೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಮ್ಯಾಟ್ ಡೆಮನ್ ಅಭಿನಯದ ಈ ಚಿತ್ರ ಅಭಿಮಾನಿಗಳಲ್ಲಿ ಹೆಚ್ಚೆಚ್ಚು ನಿರೀಕ್ಷೆ ಹುಟ್ಟಿಸಿದೆ.

ಪವನ್ ಕುಮಾರ್‌ ಅವರ ಯೂಟರ್ನ್ ಚಿತ್ರದ ಟ್ರೈಲರ್‌

ಪವನ್ ಕುಮಾರ್‌ ಅವರ ಯೂಟರ್ನ್ ಚಿತ್ರದ ಟ್ರೈಲರ್‌

ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶನದ ಯೂಟರ್ನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್ ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಬಿಡುಗಡೆಯಾದ 2 ದಿನದಲ್ಲಿ 2 ಲಕ್ಷ ಮಂದಿ ಟ್ರೈಲರ್ ವೀಕ್ಷಿಸಿದ್ದಾರೆ. ಟ್ರೈಲರ್ ವೀಕ್ಷಿಸಿದ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ನಾಗಚೈತನ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರ ಮಿಸ್ಟರಿ ಥ್ರಿಲ್ಲರ್ ಕತೆ ಹೊಂದಿದೆ.

ಅಬ್ಲುಕಾ (ಫ್ರೆಂಜಿ) ಚಿತ್ರದ ಟ್ರೈಲರ್

ಅಬ್ಲುಕಾ (ಫ್ರೆಂಜಿ) ಚಿತ್ರದ ಟ್ರೈಲರ್

ಸಂಘರ್ಷ ಪೀಡಿತ ಇಸ್ತಾನ್ ಬುಲ್ ನಲ್ಲಿ ಬಂಧಿತನಾಗಿರುವ ಖಾದಿರ್ ಪೆರೋಲ್ ಮೇಲೆ 2 ವರ್ಷ ಮೊದಲೇ ಬಿಡಗಡೆಯಾಗುತ್ತಾನೆ. ಬಳಿಕ ಪೊಲೀಸ್ ಮಾಹಿತಿದಾರನಾಗಿ, ಬಾಂಬ್ ಶೋಧದಲ್ಲಿ ಸಹಾಯ ಮಾಡುವ ಖಾದಿರ್ ಕೆಲಸವೇ ಆತನ ವೈಯುಕ್ತಿಕ ಜೀವನದ ಮೇಲೆ ದುಷ್ಪರಿಣಾಮ ಬೀರಲು ಆರಂಭಿಸುತ್ತದೆ. ಇಂತಹ ಪರಿಸ್ಥಿತಿಯಿಂದ ಖಾದಿರ್ ಹೇಗೆ ಹೊರಬರುತ್ತಾನೆ ಎಂಬುದೇ ಅಬ್ಲುಕಾ ಚಿತ್ರದ ತಿರುಳು. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಕಾರ್ನ್ ಐಲೆಂಡ್ ಚಿತ್ರದ ಟ್ರೈಲರ್

ಕಾರ್ನ್ ಐಲೆಂಡ್ ಚಿತ್ರದ ಟ್ರೈಲರ್

ಜಾರ್ಜಿಯಾ ಗಡಿಯಲ್ಲಿನ ದ್ವೀಪದಲ್ಲಿ ನಿರಾಶ್ರಿತರಾದ ತಂದೆ-ಮಗಳು ಬಂದು ನೆಲೆಸುತ್ತಾರೆ. ಆ ಪುಟ್ಟ ನೆಲದಲ್ಲಿ ಮನೆ ನಿರ್ಮಾಣ ಮಾಡಿ, ಅಲ್ಲಿಯೇ ಜೋಳವನ್ನು ಬೆಳೆದು ಸಂತೋಷದಿಂದ ಬಾಳುತ್ತಿರುವ ಸಂದರ್ಭದಲ್ಲೇ ಗಸ್ತು ತಿರುಗುವ ಸೈನಿಕರು ಅಲ್ಲಿಗೆ ಬಂದು ಅವರಿಗೆ ತೊಂದರೆ ನೀಡುತ್ತಾರೆ. ಅಲ್ಲದೆ ತುಂಬಾ ಪ್ರೀತಿಯಿಂದ ಬೆಳೆದಿದ್ದ ಬೆಳೆಯನ್ನು ನಾಶಪಡಿಸುತ್ತಾರೆ. ಅತ್ತ ವಾಸಕ್ಕಿದ್ದ ಸೂರು ಇಲ್ಲದೆ, ಜಿವನಾಧಾರಕ್ಕಾಗಿ ಬೆಳೆದಿದ್ದ ಬೆಳೆಯೂ ಇಲ್ಲದೆ ಆ ಅಪ್ಪಮಗಳು ಮುಂದೇನು ಮಾಡುತ್ತಾರೆ ಎಂಬ ಕಥೆಯೇ ಕಾರ್ನ್ ಐಲೆಂಡ್. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಮಿನಾ ವಾಕಿಂಗ್ ಚಿತ್ರದ ಟ್ರೈಲರ್

ಮಿನಾ ವಾಕಿಂಗ್ ಚಿತ್ರದ ಟ್ರೈಲರ್

ಯುದ್ಧ ಗ್ರಸ್ಥ ಕಾಬೂಲ್ ನಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಬಾಲಕಿಯೊಬ್ಬಳು ತನ್ನ ಕುಟುಂಬ ನಿರ್ವಹಣೆಗಾಗಿ ಎದುರಿಸುವ ನಾನಾ ಸಮಸ್ಯೆಗಳನ್ನು ಚಿತ್ರದಲ್ಲಿ ವಿವರಿಸಲಾಗಿದೆ. ಮಾದಕವ್ಯಸನಿಯಾದ ತಂದೆ ಬಾಲಕಿಯ ದಿನದ ಅಷ್ಟೂ ಸಂಪಾದನೆಯನ್ನು ಕಿತ್ತುಕೊಳ್ಳುತ್ತಿರುತ್ತಾನೆ. ಈ ನಡುವೆ ಅನಾರೋಗ್ಯ ಪೀಡಿತ ತಾತ ಮತ್ತು ತನ್ನ ಓದಿಗೂ ಹಣ ಹೊಂದಿಸುವ ಹೊಣೆ ಬಾಲಕಿ ಮೇಲಿರುತ್ತದೆ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯನ್ನು ಬಾಲಕಿ ಹೇಗೆ ಎದುರಿಸುತ್ತಾಳೆ ಎನ್ನುವುದನ್ನು ಮೀನಾ ವಾಂಕಿಂಗ್ ಚಿತ್ರದಲ್ಲಿ ಹೆಣೆಯಲಾಗಿದೆ. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಸಿನಿಮಾವಾಲಾ ಚಿತ್ರದ ಟ್ರೈಲರ್

ಸಿನಿಮಾವಾಲಾ ಚಿತ್ರದ ಟ್ರೈಲರ್

ಜೀವನ ನಿರ್ವಹಣೆಗಾಗಿ ಚಿತ್ರಮಂದಿರ ನಡೆಸುವ ಅಪ್ಪ ಮಗನ ಕಥೆಯನ್ನು ಸಿನಿಮಾವಾಲಾ ಚಿತ್ರ ಹೊಂದಿದೆ. ಇಡೀ ಊರಿಗೆ ಒಂದೇ ಒಂದು ಚಿತ್ರ ಮಂದಿರವಿದ್ದರೂ ಜನರು ಮಾತ್ರ ಬಾರದೇ ಇರುವುದರಿಂದ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಅವರ ಅವಿರತ ಪ್ರಯತ್ನವನ್ನು ನಿರ್ದೇಶಕ ಕೌಶಿಕ್ ಗಂಗೂಲಿ ಚಿತ್ರದಲ್ಲಿ ವಿವರಿಸಿದ್ದಾರೆ. ಸಿನಿಮಾ ಮತ್ತು ಅದರ ಮೇಲಿನ ಪ್ರೀತಿ ಒಂದಿಡೀ ಕುಟುಂಬದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ಹೇಳುವ ಪ್ರಯತ್ನವೇ ಸಿನಿಮಾವಾಲಾ ಚಿತ್ರದ ತಿರುಳು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ವಿಕ್ಟೋರಿಯಾ ಚಿತ್ರದ ಟ್ರೈಲರ್

ವಿಕ್ಟೋರಿಯಾ ಚಿತ್ರದ ಟ್ರೈಲರ್

ಸ್ಪೈನ್ ನಿಂದ ಬರ್ಲಿನ್ ಗೆ ಆಗಮಿಸುವ ಸುಂದರ ಯುವತಿಯೊಬ್ಬಳಿಗೆ ಹೊಸ ಊರಿನಲ್ಲಿ ಕಿಡಿಗೇಡಿಗಳಿಂದ ಕಿರುಕುಳ ಎದುರಾಗುತ್ತದೆ. ಆರಂಭದಲ್ಲಿ ಯುವತಿ ಇದನ್ನು ಅಲಕ್ಷಿಸಿದರೂ. ಕಿಡಿಗೇಡಿ ಯುವಕರ ಗುಂಪು ಆಕೆಯನ್ನು ಬೆನ್ನು ಬಿಡದೆ ಕಾಟ ಕೊಡಲು ಆರಂಭಿಸಿದಾಗ ಯುವತಿ ವಿರೋಧಿಸುತ್ತಾಳೆ. ಆಗ ಆಕೆಯ ಮೇಲೆ ಮಾರಣಾಂತಿಕ ಹಲ್ಲೆಗೆ ಕಿಡಿಗೇಡಿಗಳು ಮುಂದಾಗುತ್ತಾರೆ. ಆ ಕಿಡಿಗೇಡಿಗಳಿಂದ ಯುವತಿ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಎಂಬ ಕಥೆಯೇ ವಿಕ್ಟೋರಿಯಾ. ಚಿತ್ರದ ವಿಶೇಷ ವೆಂದರೆ ಇಡೀ ಚಿತ್ರಕಥೆ ಒಂದು ರಾತ್ರಿಯಲ್ಲಿ ನಡೆಯಲಿದ್ದು, ಇಡೀ ಚಿತ್ರವನ್ನು ಒಂದೇ ಶಾಟ್ ನಲ್ಲಿ ಚಿತ್ರೀಕರಿಸಲಾಗಿದೆ.

ಅಂಡರ್ ಎಲೆಕ್ಟ್ರಿಕ್ ಕ್ಲೌಡ್ಸ್ ಚಿತ್ರದ ಟ್ರೈಲರ್

ಅಂಡರ್ ಎಲೆಕ್ಟ್ರಿಕ್ ಕ್ಲೌಡ್ಸ್ ಚಿತ್ರದ ಟ್ರೈಲರ್

ರಷ್ಯಾದ ಅಭಿವೃದ್ಧಿ ಮತ್ತು ತಂತ್ರಜ್ಞಾನವನ್ನು ಹಿನ್ನಲೆಯಾಗಿರಿಸಿಕೊಂಡು ರಷ್ಯಾದ ಭೂತ, ಭವಿಷ್ಯ ಮತ್ತು ವರ್ತಮಾನ ಅಂಡರ್ ಎಲೆಕ್ಟ್ರಿಕ್ ಕ್ಲೌಡ್ಸ್ ಚಿತ್ರ ಸಾಗುತ್ತದೆ. 2017ರ ರಷ್ಯಾದ ಕಲಾತ್ಮಕತೆ, ಸಾಂಸ್ಕೃತಿಕ ವೈಭವಗಳು ಅಭಿವೃದ್ಧಿ ಹೆಸರಲ್ಲಿ ಹೇಗೆ ಮರೆಯಾಗುತ್ತಿವೆ ಎಂಬುದನ್ನು ತೋರಿಸುವ ಪ್ರಯತ್ನವನ್ನು ನಿರ್ದೇಶಕರು ಈ ಚಿತ್ರದಲ್ಲಿ ಮಾಡಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಅಲೆಕ್ಸ್ ಜರ್ಮನ್ ಜೂನಿಯರ್ ನಿರ್ದೇಶಿಸಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.