ಕಾರ್ನ್ ಐಲೆಂಡ್ ಚಿತ್ರದ ಟ್ರೈಲರ್

ಜಾರ್ಜಿಯಾ ಗಡಿಯಲ್ಲಿನ ದ್ವೀಪದಲ್ಲಿ ನಿರಾಶ್ರಿತರಾದ ತಂದೆ-ಮಗಳು ಬಂದು ನೆಲೆಸುತ್ತಾರೆ. ಆ ಪುಟ್ಟ ನೆಲದಲ್ಲಿ ಮನೆ ನಿರ್ಮಾಣ ಮಾಡಿ, ಅಲ್ಲಿಯೇ ಜೋಳವನ್ನು ಬೆಳೆದು ಸಂತೋಷದಿಂದ ಬಾಳುತ್ತಿರುವ ಸಂದರ್ಭದಲ್ಲೇ ಗಸ್ತು ತಿರುಗುವ ಸೈನಿಕರು ಅಲ್ಲಿಗೆ ಬಂದು ಅವರಿಗೆ ತೊಂದರೆ ನೀಡುತ್ತಾರೆ. ಅಲ್ಲದೆ ತುಂಬಾ ಪ್ರೀತಿಯಿಂದ ಬೆಳೆದಿದ್ದ ಬೆಳೆಯನ್ನು ನಾಶಪಡಿಸುತ್ತಾರೆ. ಅತ್ತ ವಾಸಕ್ಕಿದ್ದ ಸೂರು ಇಲ್ಲದೆ, ಜಿವನಾಧಾರಕ್ಕಾಗಿ ಬೆಳೆದಿದ್ದ ಬೆಳೆಯೂ ಇಲ್ಲದೆ ಆ ಅಪ್ಪಮಗಳು ಮುಂದೇನು ಮಾಡುತ್ತಾರೆ ಎಂಬ ಕಥೆಯೇ ಕಾರ್ನ್ ಐಲೆಂಡ್. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com