'ವಾಸ್ತು ಪ್ರಕಾರ' ಆಡಿಯೋ ಟೀಸರ್ನಿರ್ದೇಶಕ ಯೋಗರಾಜ್ ಭಟ್ ಅವರ ಬಹುನಿರೀಕ್ಷಿತ ಚಿತ್ರ 'ವಾಸ್ತು ಪ್ರಕಾರ' ಚಿತ್ರದ ಆಡಿಯೋ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಆಡಿಯೋವನ್ನು ವಿಶೇಷ ಅನ್ನುವುದಕ್ಕಿಂತ ವಿಭಿನ್ನವಾಗಿ ಪ್ರಚಾರ ಮಾಡಲಾಗಿದೆ...
1st ರ್ಯಾಂಕ್ ರಾಜು ಚಿತ್ರದ ಟ್ರೈಲರ್ಟ್ರೈಲರ್ ನಿಂದಲೇ ಸುದ್ದಿಯಾಗುತ್ತಿರುವ ಚಿತ್ರಗಳ ಪಟ್ಟಿಗೆ ಸೇರುವ ಮತ್ತೊಂದು ಚಿತ್ರ ಎಂದರೆ "1st ರ್ಯಾಂಕ್ ರಾಜು'. ಬಹುತೇಕ ಹೊಸ ಮುಖಗಳೇ ಕಾಣಿಸಿಕೊಂಡಿರುವ ಈ ಚಿತ್ರದ ಟ್ರೈಲರ್ ಶಿಕ್ಷಣ ವ್ಯವಸ್ಥೆಯನ್ನೇ ಅಣಕಿಸುವಂತಿದೆ..
'ಹಗ್ಗದಕೊನೆ' ಚಿತ್ರದ ಟ್ರೇಲರ್ದಯಾಳ್ ಪದ್ಮನಾಭನ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಹಗ್ಗದಕೊನೆ ಇದೇ ಶುಕ್ರವಾರ ತೆರೆಕಂಡಿದ್ದು, ನವೀನ ಕೃಷ್ಣಾ, ಸುಚೇಂದ್ರ ಪ್ರಸಾದ್, ದತ್ತಣ್ಮ, ಸಿಹಿಕಹಿ ಗೀತಾ, ವಿ.ಮನೋಹರ್ ಮತ್ತಿತ್ತರು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
'ಐ' ಚಿತ್ರದ ಹೊಸ ಟ್ರೇಲರ್ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ ಮತ್ತು ವಿಕ್ರಮ್ ಅಭಿನಯದ ಬಹು ನಿರೀಕ್ಷಿತ 'ಐ' ಚಿತ್ರದ ಹೊಸ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ನಲ್ಲಿ ಭಾರಿ ಸುದ್ದು ಮಾಡುತ್ತಿದೆ. ಬಿಡುಗಡೆಯಾದ 24 ಗಂಟೆಯಲ್ಲೇ 8 ಲಕ್ಷದ 56 ಸಾವಿರ ಜನರು ಇದನ್ನು ವೀಕ್ಷಿಸಿದ್ದಾರೆ.
'ಆರಂಭ'ದ 'ಆ ದೃಶ್ಯ'ಇತ್ತೀಚೆಗೆ ಗೋವಾದಲ್ಲಿ ಆಡಿಯೋ ಬಿಡುಗಡೆ ಮಾಡಿದ್ದ ಆರಂಭ ಚಿತ್ರತಂಡ ಇದೀಗ ಟೀಸರ್ ಬಿಡುಗಡೆ ಮಾಡಿದ್ದು, ಯೂಟ್ಯೂಬ್ ನಲ್ಲಿ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಟ್ರೇಲರ್ ನಲ್ಲಿ ನಾಯಕಿಯ ಎದೆ ಮುಟ್ಟುವ ದೃಶ್ಯ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಇದು 'ಪ್ರಚಾರದ ಗಿಮಿಕ್' ಎಂದು ಸ್ಯಾಂಡಲ್ ವುಡ್ ಮಂದಿ ಮೂಗು ಮುರಿಯುತ್ತಿದ್ದಾರೆ.
'ರಾಟೆ' ಚಿತ್ರದ ಟ್ರೇಲರ್ಅಂಬಾರಿ, ಅದ್ದೂರಿ ಚಿತ್ರಗಳ ಖ್ಯಾತಿ ಎಪಿ ಅರ್ಜುನ್ ನಿರ್ದೇಶನ 'ರಾಟೆ' ಚಿತ್ರದಲ್ಲಿ ಧನಂಜಯ್ ಮತ್ತು ಶೃತಿಹರಿಹರನ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಸ್ಯಾಂಡಲ್ವುಡ್ನಲ್ಲಿ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಮಿ. ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಟ್ರೇಲರ್ಸ್ಯಾಂಡಲ್ ವುಡ್ ನಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮಿ. ಅಂಡ್ ಮಿಸಸ್ ರಾಮಾಚಾರಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದೆ.
'ಖಾಮೋಶಿಯಾ' ಚಿತ್ರದ ಟ್ರೇಲರ್ಮಹೇಶ್ ಭಟ್ ನಿರ್ದೇಶನದ ಖಾಮೋಶಿಯಾ ಚಿತ್ರದ ಟ್ರೇಲರ್ ಯೂಟ್ಯೂಬ್ನಲ್ಲಿ ಅಪಲೋಡ್ ಆದ ಕೇವಲ 36 ಗಂಟೆಗಳಲ್ಲಿ ಹತ್ತು ಲಕ್ಷ ಬಾರಿ ವೀಕ್ಷಣೆಗೊಳಗಾಗಿದ್ದು, ಹಿಂದಿ ಚಿತ್ರರಂಗದಲ್ಲಿ ಸ್ಟಾರ್ಗಳ ಹೊರತಾಗಿ ಇಷ್ಟು ವೇಗವಾಗಿ ಇಷ್ಟೊಂದು ಹಿಟ್ ಪಡೆದಿರುವ ಮೊದಲ ಚಿತ್ರವೆಂಬ ಖ್ಯಾತಿ ಪಡೆದಿದೆ.
'ಲಿಂಗಾ' ಚಿತ್ರದ ಟ್ರೈಲರ್ರಜನಿ ಅಭಿಮಾನಿಗಳಿಗೆ ಡಬಲ್ ಸಡಗರ. ತಮ್ಮ ಆರಾಧ್ಯ ದೈವ ರಜನಿಕಾಂತ್ ಅವರ ಹುಟ್ಟುಹಬ್ಬದ ಖುಷಿ ಒಂದೆಡೆಯಾದರೆ, ಅವರ ಹೊಸ ಚಿತ್ರ ಲಿಂಗಾ ದೇಶಾದ್ಯಂತ ತೆರೆ ಕಂಡಿದೆ.
ಸನ್ ಆಫ್ ಟ್ರಾಕೋ ಚಿತ್ರದ ಟ್ರೇಲರ್ಚಿಲಿ ಮೂಲದ 14 ವರ್ಷದ ಓರ್ವ ಬಾಲಕ ತನ್ನ ತಂದೆಯ ಕಾರಣದಿಂದಾಗಿ ಸಮಾಜದಿಂದ ಮಾನಸಿಕ ಹಿಂಸೆಗೆ ಒಳಗಾಗುತ್ತಿರುತ್ತಾನೆ. ಹೀಗಾಗಿ ಒಂದು ದಿನ ಆ ಬಾಲಕ ತನ್ನ ತಂದೆಯ ಕುರಿತ ಸತ್ಯಾಂಶಗಳನ್ನು ತಿಳಿಯಲೇ ಬೇಕು ಎಂದು ನಿರ್ಧರಿಸುತ್ತಾನೆ. ತನ್ನ ತಂದೆಯ ಕುರಿತ ರಹಸ್ಯ ತಿಳಿವ ದಾರಿಯಲ್ಲಿ ಆ ಬಾಲಕ ಎದುರಿಸುವ ಸಾವಾಲುಗಳೇನು ಎಂಬುದು ಸನ್ ಆಫ್ ಟ್ರಾಕೋ ಚಿತ್ರದ ಸಂಕ್ಷಿಪ್ತ ಕಥಾ ಹಂದರ. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ.
ಕೋಕಿಲಾ ಚಿತ್ರದ ಟ್ರೇಲರ್ಚಿತ್ರವು ವೈದ್ಯಕೀಯ ವಿದ್ಯಾರ್ಥಿನಿ ಕೋಕಿಲಾ ಮತ್ತು ವಿಜಯಕುಮಾರ್ ಎಂಬ ಇಂಜಿನಿಯರ್ ನಡುವಿನ ಪ್ರೀತಿಯ ಕುರಿತಾಗಿದ್ದು, ಕೋಕಿಲಾ ಪಾತ್ರದಲ್ಲಿ ಶೋಭಾ ಮತ್ತು ವಿಜಯ್ ಕುಮಾರ್ ಪಾತ್ರದಲ್ಲಿ ನಟ ಕಮಲ್ ಹಾಸನ್ ನಟಿಸಿದ್ದಾರೆ. ಈ ಚಿತ್ರವು ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರ ನಿರ್ದೇಶನದ ಮೊಟ್ಟ ಮೊದಲ ಚಿತ್ರವಾಗಿದ್ದು, 1977ರಲ್ಲಿ ಚಿತ್ರವು ತೆರೆಕಂಡಿತ್ತು. ಈ ಚಿತ್ರ ಶುಕ್ರವಾರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳುತ್ತಿದೆ.
'ಡಿಸೆಂಬರ್-1' ಚಿತ್ರದ ಟ್ರೇಲರ್ಚಿತ್ರವು ರೊಟ್ಟಿ ಮಾರಿ ಜೀವನ ನಡೆಸುವ ದೇವಕ್ಕ ಎಂಬ ಮಹಿಳೆಯ ಕುರಿತಾಗಿದ್ದು, ಸಂದರ್ಭವೊಂದರಲ್ಲಿ ರಾಜ್ಯದ ಮುಖ್ಯಮಂತ್ರಿಗಳು ದೇವಕ್ಕನ ಮನೆಗೆ ಆಗಮಿಸುತ್ತಾರೆ. ಈ ವೇಳೆ ದೇವಕ್ಕನ ಜೀವನದಲ್ಲಿ ನಡೆಯುವ ಕೆಲ ಘಟನೆಗಳು ಆಕೆಯ ಜೀವನವನ್ನು ಹೇಗೆ ಬದಲಿಸುತ್ತದೆ ಎಂಬುದು ಡಿಸೆಂಬರ್-1 ಚಿತ್ರದ ಕಥಾ ಹಂದರವಾಗಿದೆ. ಚಿತ್ರವನ್ನು ನಿರ್ದೇಶಕ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳಲಿದೆ.
ಮಿ. ಕಪ್ಲಾನ್ ಚಿತ್ರದ ಟ್ರೇಲರ್ಮೂಲತಃ ಉರುಗ್ವೆಯವನಾದ ಕಪ್ಲಾನ್ 2ನೇ ಮಹಾಯುದ್ಧದಲ್ಲಿ ನಾಜಿಗಳ ಮೇಲೆ ನಡೆಯುತ್ತಿದ್ದ ಕೌರ್ಯದಿಂದಾಗಿ ದಕ್ಷಿಣ ಅಮೆರಿಕಕ್ಕೆ ಪಲಾಯನ ಮಾಡಿದವನಾಗಿರುತ್ತಾನೆ. ಪ್ರಸ್ತುತ ಬೀಚ್ ಬಳಿ ಇರುವ ಬಾರ್ ಅವನ ಕುಟುಂಬದ ಜೀವನಾಧಾರವಾಗಿದ್ದು, 76 ವರ್ಷದ ಕಪ್ಲಾರ್ ತನ್ನ ಇಳಿವಯಸ್ಸಿನಲ್ಲಿ ತನ್ನ ಇತಿಹಾಸದ ಮೆಲುಕು ಹಾಕುತ್ತಿರುತ್ತಾನೆ. ಇತಿಹಾಸವನ್ನು ಮರುಕಳಿಸುವ ನಿಟ್ಟಿನಲ್ಲಿ ಜರ್ಮನ್ ಪ್ರಜೆಯನ್ನು ಅಪಹರಿಸಿ ಇಸ್ರೇಲಿಗೆ ಕರೆದೊಯ್ಯುವ ತವಕದಲ್ಲಿರುತ್ತಾನೆ. ಇದು ಕಪ್ಲಾನ್ ಚಿತ್ರದ ಸಂಕ್ಷಿಪ್ತ ಕಥೆಯಾಗಿದ್ದು, ಈ ಚಿತ್ರ ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2014ಡಿಸೆಂಬರ್ 4ರಿಂದ ಆರಂಭಗೊಳ್ಳಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಕುರಿತ ಪ್ರೋಮೋ
ಪಿಕೆ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಅಮೀರ್ ಖಾನ್ ಮತ್ತು ಅನುಷ್ಕಾ ಶರ್ಮಾ ತಾರಾಗಣದ ಪಿಕೆ ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆಯಾಗಿದೆ. ಕೃಪೆ: UTV Motion Pictures
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!