ಸಿನಿಮಾವಾಲಾ ಚಿತ್ರದ ಟ್ರೈಲರ್

ಜೀವನ ನಿರ್ವಹಣೆಗಾಗಿ ಚಿತ್ರಮಂದಿರ ನಡೆಸುವ ಅಪ್ಪ ಮಗನ ಕಥೆಯನ್ನು ಸಿನಿಮಾವಾಲಾ ಚಿತ್ರ ಹೊಂದಿದೆ. ಇಡೀ ಊರಿಗೆ ಒಂದೇ ಒಂದು ಚಿತ್ರ ಮಂದಿರವಿದ್ದರೂ ಜನರು ಮಾತ್ರ ಬಾರದೇ ಇರುವುದರಿಂದ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಅವರ ಅವಿರತ ಪ್ರಯತ್ನವನ್ನು ನಿರ್ದೇಶಕ ಕೌಶಿಕ್ ಗಂಗೂಲಿ ಚಿತ್ರದಲ್ಲಿ ವಿವರಿಸಿದ್ದಾರೆ. ಸಿನಿಮಾ ಮತ್ತು ಅದರ ಮೇಲಿನ ಪ್ರೀತಿ ಒಂದಿಡೀ ಕುಟುಂಬದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂದು ಹೇಳುವ ಪ್ರಯತ್ನವೇ ಸಿನಿಮಾವಾಲಾ ಚಿತ್ರದ ತಿರುಳು. ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com