ಖರೀದಿಗೆ ದಾರಿ

ಖರೀದಿಗೆ ದಾರಿ
Updated on: 

ಮನುಷ್ಯನಿಗೆ ಆಸೆ ಇರುವುದು ಸಹಜ. ಯಾವುದೇ ವಸ್ತುವನ್ನು ಖರೀದಿಸುವಾಗಲೂ ಹಣ, ಬಾಳಿಕೆಯನ್ನು ಆಲೋಚಿಸಿಯೇ ಖರೀದಿಸಬೇಕು. ಮುಖ್ಯವಾಗಿ ನಮಗೆ ನಿತ್ಯ ಜೀವನದಲ್ಲಿ ಅಗತ್ಯವಾದ ವಸ್ತುಗಳೆಂದರೆ ದಿನಸಿ ಸಾಮಾನುಗಳು ಮತ್ತು ತರಕಾರಿ. ಅದನ್ನು ಮನೆಗೆ ಖರೀದಿಸುವಾಗ ಸೂಕ್ಷ್ಮತೆಗಳನ್ನು ಅರಿಯುವುದು ಬಹಳ ಮುಖ್ಯ. ಅಂಥವುಗಳೆಂದರೆ...
4    ವಾರವಾದರೂ ಕೆಡದಂತೆ ಕಡಿಮೆ ಬೆಲೆಯ ಹೆಚ್ಚು ಪ್ರಮಾಣದಲ್ಲಿ ಸಿಗುವ ತರಕಾರಿಗಳನ್ನು ಖರೀದಿಸಿ.
4    ಸಿಪ್ಪೆಯನ್ನು ಪುನಃ ಪಲ್ಯ, ಗೊಜ್ಜು ಮಾಡಬಹುದಾದ ತರಕಾರಿಗಳನ್ನು ಆಯ್ಕೆ ಮಾಡಿಕೊಳ್ಳಿ.
4    ಕಿತ್ತಳೆ ಸಿಪ್ಪೆ, ಲಿಂಬೆಯ ಸಿಪ್ಪೆಯನ್ನು ಬಳಸಿ ಗೊಜ್ಜು, ಉಪ್ಪಿನಕಾಯಿ ಮಾಡಬಹುದು. ಶರಬತ್ತು ಮಾಡಿ ಉಳಿದ ತೊಗಟೆಯನ್ನು ಉಪ್ಪಲ್ಲಿ ಹಾಕಿಟ್ಟು ಉಪ್ಪಿನಕಾಯಿ ತಯಾರಿಸಬಹುದು.
4    ಪ್ಯಾಕೆಟ್‌ನಿಂದ ಒಡೆದ ವಸ್ತುಗಳನ್ನು ಡಬ್ಬದಲ್ಲೇ ತುಂಬಿಡಿ. ಡಬ್ಬ ಇಲ್ಲದಿದ್ದರೆ ಪ್ಯಾಕೆಟ್‌ಗೆ ಪಿನ್ ಮಾಡಿ. ಹಾಗೆ ಬಿಟ್ಟರೆ ಒಳಗಿದ್ದ ವಸ್ತುಗಳು ಹಾಳಾಗುತ್ತವೆ. ಇದು ತಿಂಡಿಗಳಿಗೂ ಅನ್ವಯಿಸುತ್ತದೆ.
4    ಎಲ್ಲ ರೀತಿಯ ಮಸಾಲೆ ಇತರೆ ಪರಿಮಳಯುತ ಧಾನ್ಯಕಾಳು ಸ್ವಲ್ಪ ಸ್ವಲ್ಪ ಉಳಿದಿದ್ದರೆ ಎಲ್ಲಾ ಸೇರಿಸಿ ರಸಂ ಮಾಡಿ. ಒಂದು ದಿನದ ಊಟಕ್ಕಾಗುತ್ತದೆ.
4    ಆದಷ್ಟು ಹಾಳಾಗಿ ಹೋಗುವ ತರಕಾರಿ, ಧಾನ್ಯಗಳನ್ನು ಮೊದಲು ಬಳಸಿ, ವಾರಾಂತ್ಯದಲ್ಲಿ ಉಳಿದಿದ್ದನ್ನು ಬಳಸಿಕೊಳ್ಳಿ.
4    ಬೇಸಿಗೆ ಕಾಲದಲ್ಲಿ ಹಾಲನ್ನು ಮಧ್ಯಾಹ್ನ, ರಾತ್ರಿ ಎರಡೂ ಹೊತ್ತು ಚೆನ್ನಾಗಿ ಸೌಟು ಹಾಕಿ, ಮಗುಚಿ ಬಿಸಿ ಮಾಡಿ. ಹೀಗೆ ಮಾಡುವುದರಿಂದ ಹಾಲು ಬೇಗ ಹಾಳಾಗುವುದಿಲ್ಲ. ಕೆಲವೊಮ್ಮೆ ತುಂಬಾ ಸೆಖೆ ಇದ್ದಾಗ ಫ್ರಿಡ್ಜ್‌ನಲ್ಲಿಟ್ಟರೂ ಹಾಳಾಗುತ್ತದೆ.
4    ಮನೆಯಲ್ಲಿರುವ ಚಟ್ಟಿಯಲ್ಲಿ ಕೊತ್ತಂಬರಿ ಕಾಳನ್ನು ಹಾಕಿ. ಸೊಗಸಾಗಿ ಕೊತ್ತಂಬರಿ ಸೊಪ್ಪು ಬರುವುದು. ಕೊತ್ತಂಬರಿಗೆ ಹಣ ನೀಡಿ ಖರೀದಿಸುವುದನ್ನು ತಡೆಯಬಹುದು.
4    ಆದಷ್ಟು ದವಸ ಧಾನ್ಯಗಳನ್ನು ಬಿಸಿಲಲ್ಲಿ ಹಾಕಿ ಜೋಪಾನು ಮಾಡಿ. ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ ಹುಳ ಆಗುವುದಿಲ್ಲ ನೋಡ್ರಿ.
4    ಪ್ರಿಜ್‌ನಲ್ಲಿ ತರಕಾರಿಯನ್ನು ಪ್ರತ್ಯೇಕಗೊಳಿಸಿ, ಪೇಪರ್‌ನಲ್ಲಿ ಸುತ್ತಿಡಬೇಕು.
4    ಕೊಳೆತ ಪದಾರ್ಥಗಳನ್ನು ಕೂಡಲೇ ತೆಗೆಯಬೇಕು. ಹೀಗೆ ಮಾಡದಿದ್ದರೆ ಉಳಿದ ತರಕಾರಿಯೂ ಹಾಳಾಗುತ್ತದೆ.
4    ಬಿಡಿ ಸಾಮಾನುಗಳನ್ನು ನಿಮಗೆ ಚೆನ್ನಾಗಿ ಪರಿಚಯವ ಇರೋ ಅಂಗಡಿಯಿಂದಲೇ ಖರೀದಿಸಿ.
4    ಅಂಗಡಿಗಳಲ್ಲಿ ಮೇಲೆ ಎದುರು(ಕಣ್ಣಿಗೆ ಕಾಣುವಂತೆ) ಇಟ್ಟ ವಸ್ತುಗಳನ್ನು ಖರೀದಿಸುವ ಬದಲು, ಒಳಗಿಟ್ಟ ತರಕಾರಿಯನ್ನು, ವಸ್ತುಗಳನ್ನು ಕೇಳಿ ಖರೀದಿಸಿ.  ಹೀಗೆ ಮಾಡಿದರೆ, ಒಳ್ಳೆಯ ಸಾಮಾನು ನಿಮ್ಮದಾಗುವುದು.
-ಕೃಷ್ಣವೇಣಿ ಪ್ರಸಾದ್ ಮುಳಿಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com