ಮಳೆಗಾಲದಲ್ಲಿ ಆಹಾರ ಸಂಗ್ರಹಣೆ ದೊಡ್ಡ ಸಮಸ್ಯೆ. ಆಹಾರ ತಂಪಾದರೆ ಎಲ್ಲಿ ಬೂಸ್ಟು ಬರುತ್ತದೆ ಎಂಬ ಆತಂಕ ಬೇರೆ. ಇದಕ್ಕಾಗಿ ಕಿಲ್ನರ್ ಕ್ಲಿಪ್ ಟಾಪ್ ಜಾರ್ ಸ್ಕ್ವೇರ್ ಎಂಬ ಹೊಸದಾದ ಬಾಟಲ್ ರೂಪಿತವಾಗಿದೆ. ಇದರಲ್ಲಿ ಉಪ್ಪಿನಕಾಯಿ, ಚಟ್ನಿಗಳನ್ನು ಶೇಖರಿಸಬಹುದು. ಬಾಟಲಿಯು ಈ ಎರಡೂ ಪದಾರ್ಥವನ್ನು ಹೆಚ್ಚು ಕಾಲ ಕೆಡದಂತೆ ನೋಡಿಕೊಳ್ಳುತ್ತದೆ. ಗ್ಲಾಸ್‌ನಿಂದ ತಯಾರಿಸಲಾಗಿರುವ ಬಾಟಲ್‌ನ ಮುಚ್ಚಳ ಬಲಿಷ್ಠವಾಗಿದ್ದು, ಸ್ಟೈನ್‌ಲೆಸ್ ಸ್ಟೀಲ್‌ನಿಂದ ಕ್ಲಿಪ್ ಕೂಡ ಅಳವಡಿಸಲಾಗಿದೆ. ಇದರಬೆಲೆ ರು. 445.