ಮನೆಯ ಬೆಡ್ರೂಮ್ನಲ್ಲಿರುವ ಬೆಡ್ ಲ್ಯಾಂಪ್ ಹಳೆಯದಾಗಿದ್ದರೆ ಅದನ್ನು ಬದಲಿಸಿ. ಆಧುನಿಕ ಶೈಲಿಯ ಲ್ಯಾಂಪ್ ತಂದಿಟ್ಟು, ರೂಮ್ಗೆ ಕಳೆ ಬರುವಂತೆ ಮಾಡಿ.
ಈಶಾನ್ಯ ಆಗ್ನೇಯ ಮತ್ತು ಪಶ್ಚಿಮ ಭಾಗಗಳಲ್ಲಿ ಮನೆ ಎತ್ತರವಿದ್ದು, ನೈಋತ್ಯ ಭಾಗವು ತಗ್ಗಿನಲ್ಲಿದ್ದರೆ ಅದು ಧಾನ್ಯ ನಷ್ಟವನ್ನು ಸೂಚಿಸುತ್ತದೆ.
ಅಡುಗೆ ಮನೆಯಲ್ಲಿ ವಸ್ತುಗಳನ್ನು ಸಂಗ್ರಹಿಸುವ ಮರದ ಕಪಾಟು ಇದ್ದರೆ, ಪ್ರತಿ ವರ್ಷಕ್ಕೊಮ್ಮೆಯಾದರೂ ಅದರ ಒಳಗೆ ಬಣ್ಣ ಹಚ್ಚುತ್ತಿರಿ. ಇದರಿಂದ ಅದನ್ನು ಶುಚಿಯಾಗಿಟ್ಟುಕೊಳ್ಳಲು ಸಾಧ್ಯ.
ಮನೆಯ ಬಾಹ್ಯ ವಿನ್ಯಾಸ ನಿಮ್ಮ ಒಳಮನೆಯ ಪ್ರತಿರೂಪ. ಹೀಗಾಗಿ ಮನೆಯ ಹೊರಭಾಗದಲ್ಲಿ ಜಾಗ ಇದ್ದಲ್ಲಿ, ಅಲ್ಲಿ ಆಕರ್ಷಣೀಯ ವಿನ್ಯಾಸ ಮಾಡುವುದು ಒಳಿತು. ಸಾಮಾನ್ಯವಾಗಿ ಮನೆಯ ಹೊರಮೈಯನ್ನು ಹಸಿರುಗೊಳಿಸಿದರೆ ಬೇಸಿಗೆಯ ಇಂಥ ಸಂದರ್ಭದಲ್ಲಿ ತಂಪಾದ ಗಾಳಿಯಾದರೂ ಬೀಸುತ್ತದೆ.
ಬೇಸಿಗೆ ಕಾಲ ಇದಾಗಿರುವುದರಿಂದ ಮರದ ಪೀಠೋಪಕರಣಗಳನ್ನು ಬಳಕೆ ಉತ್ತಮ. ಕಾರಣ ಹಸಿರಿನ ಮಧ್ಯೆ ಇರುವುದರಿಂದ ಕೂತರೆ, ತಂಪು ಅನುಭವ ನೀಡುತ್ತದೆ.