ವಿದೇಶ

ಮೂವರು ಅಲ್ ಜಜೀರಾ ಪತ್ರಕರ್ತರಿಗೆ ಮೂರು ವರ್ಷ ಜೈಲು ಶಿಕ್ಷೆ

ಈಜಿಪ್ಟ್ ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ ಎಂಬಂತಹ ಸುಳ್ಳು ಚಿತ್ರಣಗಳನ್ನು ನೀಡಲಾಗಿದೆ ಎಂಬ ಆರೋಪ ಹಾಗೂ ಭಯೋತ್ಪಾದನೆ ಸಂಬಂಧದಲ್ಲಿ ಬಹಿಷ್ಕೃತಗೊಂಡಿರುವ...

ಮೂವರು ಅಲ್ ಜಜೀರಾ ಪತ್ರಕರ್ತರಿಗೆ ಮೂರು ವರ್ಷ ಜೈಲು ಶಿಕ್ಷೆ
ಈಜಿಪ್ಟ್ ನ್ಯಾಯಮೂರ್ತಿಗಳು
Published On :

ಕೈರೋ: ಈಜಿಪ್ಟ್ ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ ಎಂಬಂತಹ ಸುಳ್ಳು ಚಿತ್ರಣಗಳನ್ನು ನೀಡಲಾಗಿದೆ ಎಂಬ ಆರೋಪ ಹಾಗೂ ಭಯೋತ್ಪಾದನೆ ಸಂಬಂಧದಲ್ಲಿ ಬಹಿಷ್ಕೃತಗೊಂಡಿರುವ ಮುಸ್ಲಿಂ ಬ್ರದರ್ಹುಡ್ ಗೆ ಬೆಂಬಲ ನೀಡಿದ್ದ ಆರೋಪದ ಮೇಲೆ ಮೂವರು ಅಲ್ ಜಜೀರಾ ಪತ್ರಕರ್ತರು ತಪ್ಪಿತಸ್ಥರು ಎಂದು ಈಜಿಫ್ಟಿನ್ ಕೋರ್ಟ್ ಆದೇಶಿಸಿದ್ದು, ಮೂವರಿಗೂ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಮೂವರು ಪತ್ರಕರ್ತರಾದ ಈಜಿಪ್ಟ್ ನ ಬಹೇರ್ ಮೊಹಮ್ಮದ್, ಈಜಿಪ್ಟ್ ಸಂಜಾತ ಕೆನಡಾ ಪ್ರಜೆ ಮೊಹಮದ್ ಫಾಹ್ನಿ ಹಾಗೂ ಆಸ್ಟ್ರೇಲಿಯಾದ ಪೀಟರ್ ಗ್ರೆಸ್ಟ್ ಗೆ ತಲಾ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ ಅಲ್ ಜಜೀರಾ ಟಿವಿ ಇಂಗ್ಲಿಷ್ ಸುದ್ದಿವಾಹಿನಿಯ ನಿರ್ದೇಶಕ ಮುಸ್ತಫಾ ಸೌಗ್ ಹೇಳಿದ್ದಾರೆ.

ಇಡೀ ಪ್ರಕರಣವನ್ನು ರಾಜಕೀಯ ಮಾಡಲಾಗಿದೆ. ಪ್ರಕರಣ ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಅಲ್ ಜಜೀರಾ ಆರೋಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.