

ಬೀಜಿಂಗ್: ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ಮುಂದುವರೆದಿರುವುದು ಸಂತಸದ ವಿಷಯ ಎಂದು ನೆರೆ ರಾಷ್ಟ್ರ ಚೀನಾ ಹೇಳಿದೆ. ಭಾರತ- ಪಾಕ್ ಎನ್ಎಸ್ಎ ಮಟ್ಟದ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್, ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಉತ್ತಮಗೊಳ್ಳುತ್ತದೆ ಎಂದು ನಿರೀಕ್ಷಿಸುತ್ತೇವೆ ಎಂದು ಹೇಳಿದ್ದಾರೆ.
ಡಿ.6 ರಂದು ನಡೆದ ಭಾರತ-ಪಾಕ್ ಎನ್.ಎಸ್.ಎ ಮಟ್ಟದ ದ್ವಿಪಕ್ಷೀಯ ಸಭೆಯಲ್ಲಿ ಉಭಯ ದೇಶದ ಎನ್ಎಸ್ಎ ಗಳು ರಚನಾತ್ಮಕ ಸಂಬಂಧ ಮುಂದುವರೆಸಲು ತೀರ್ಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಚೀನಾ ಪ್ರತಿಕ್ರಿಯೆ ನೀಡಿದೆ.