ಟ್ರಂಪ್ ಹೇಳಿಕೆಗೆ ಮಲಾಲಾ ಆಕ್ಷೇಪ

ಮುಸ್ಲಿಮರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಬೇಕು ಎಂಬ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ...
ಮಲಾಲಾ ಯೂಸುಫ್ ಝಾಯ್
ಮಲಾಲಾ ಯೂಸುಫ್ ಝಾಯ್
ಲಂಡನ್: ಮುಸ್ಲಿಮರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಬೇಕು ಎಂಬ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ಝಾಯ್ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. 
ಟ್ರಂಪ್ ಹೇಳಿಕೆಯು ದ್ವೇಷದಿಂದ ಕೂಡಿದ್ದು ಎಂದಿದ್ದಾಳೆ. ಭಯೋತ್ಪಾದನೆಗೆ ಮುಸ್ಲಿಮರೇ ಕಾರಣ ಎನ್ನುವುದರಿಂದ ಇನ್ನಷ್ಟು ಉಗ್ರರು ಹುಟ್ಟುತ್ತಾರೆಯೇ ಹೊರತು ಪರಿಹಾರ ಸಿಗುವುದಿಲ್ಲ. ಟ್ರಂಪ್ ಹೇಳಿಕೆ ದ್ವೇಷಪೂರಿತವಾದದ್ದು. ಇಂತಹ ಸಿದ್ಧಾಂತ ಇನ್ನೊಬ್ಬರತ್ತ ತಾರತಮ್ಯ ಭಾವನೆ ಪ್ರದರ್ಶಿಸುತ್ತದೆ. 
ರಾಜಕಾರಣಿಗಳಾಗಲೀ, ಮಾಧ್ಯಮಗಳಾಗಲೀ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದಿದ್ದಾಳೆ ಮಲಾಲಾ. ಇದೇ ವೇಳೆ, ಐಎಸ್ ಉಗ್ರರು ಇರುವ ಪ್ರದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸ ಬೇಕು ಎಂದು ಟ್ರಂಪ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com