ಪ್ರಧಾನಿ ಮೋದಿ ಪಾಕ್ ಭೇಟಿ ಅನಿರೀಕ್ಷಿತ; ಅಮೆರಿಕ ಪತ್ರಿಕೆಗಳಲ್ಲಿ ಮೋದಿ ಪ್ರಶಂಸೆ

ಆಫ್ಘಾನಿಸ್ತಾನ ಭೇಟಿ ಬಳಿಕ ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಕೆ ವಿಶ್ವದ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿಬಂದಿವೆ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ನವದೆಹಲಿ: ಆಫ್ಘಾನಿಸ್ತಾನ ಭೇಟಿ ಬಳಿಕ ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಕೆ ವಿಶ್ವದ ಎಲ್ಲೆಡೆಯಿಂದ ಪ್ರಶಂಸೆಯ ಮಾತುಗಳು ಕೇಳಿಬಂದಿವೆ.

ಪಾಕಿಸ್ತಾನದ ಪ್ರಬಲ ನಾಯಕರೆನಿಸಿಕೊಂಡಿರುವ ಪಿಪಿಪಿ ಚೇರ್ಮನ್ ಬಿಲವಾಲ್ ಬುಟ್ಟೋ ಜರ್ದಾರಿ ಮತ್ತು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಕೂಡ ಸ್ವಾಗತಾರ್ಹ ಬೆಳವಣಿಗೆ ಎಂದಿದ್ದಾರೆ.

ಅಮೆರಿಕ ಮಾಧ್ಯಮಗಳಿಂದ ಪ್ರಶಂಸೆ
ಅಮೆರಿಕ ಮಾಧ್ಯಮಗಳು ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಇದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿವೆ. ಅಮೆರಿಕದ ಪ್ರಮುಖ ಪತ್ರಿಕೆಗಳಲ್ಲಿ ಒಂದಾದ ‘ದ ವಾಲ್ ಸ್ಟ್ರೀಟ್ ಜರ್ನಲ್’ ಅಣುಶಕ್ತಿ ಹೊಂದಿರುವ ಉಭಯ ರಾಷ್ಟಗಳು ಬಾಂಧವ್ಯ ವೃದ್ಧಿಸಿಕೊಳ್ಳುವಲ್ಲಿ ಮೋದಿ ಭೇಟಿ ಸ್ವಾಗತಾರ್ಹ. ಇದು ಏಷ್ಯಾದ ಎರಡು ಪ್ರಬಲ ರಾಷ್ಟ್ರಗಳು ತೆಗೆದುಕೊಳ್ಳುತ್ತಿರುವ ಮಹತ್ವಪೂರ್ಣ ಹೆಜ್ಜೆ ಎಂದು ಶ್ಲಾಘಿಸಿದೆ.

ದ ಚಿಕಾಗೋ ಟ್ರಿಬ್ಯೂನ್’ ಟೈಮ್ ಮ್ಯಾಗಝಿನ್, ನ್ಯಾಷನಲ್ ಪಬ್ಲಿಕ್ ರೇಡಿಯೋ ಕೂಡ ಇದನ್ನು ಶ್ಲಾಘಿಸಿ ಬರೆದಿದೆ. ಎರಡು ದೇಶಗಳು ಸೇರಿ ಒಂದು ದೊಡ್ಡ ಶಕ್ತಿಯಾಗಿ ಹೊರಹೊಮ್ಮಲು ಇದು ಮಹತ್ವದ ಹೆಜ್ಜೆ ಎಂದು ಬಣ್ಣಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com