

ಲಂಡನ್: ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಪಾಕಿಸ್ತಾನದ ಮಲಾಲಾ ಯೂಸುಫ್ ಜಾಯ್ ತಾಯ್ನಾಡಿಗೆ ಹಿಂದಿರುಗುವ ಇಂಗಿತ ವ್ಯಕ್ತ ಪಡಿಸಿದ್ದಾರೆ. ಪಾಕ್ ಪ್ರಧಾನಿ ನವಾಜ್ ಷರೀಫ್ ರೊಂದಿಗೆ ತನ್ನ ಆಸೆ ಹೇಳಿಕೊಂಡಿರುವ ಮಲಾಲಾ, ತಾನು ಜನಸೇವೆ ಮಾಡ ಬೇಕೆಂದಿದ್ದೇನೆ ಎಂದಿದ್ದಾರೆ. ಮಲಾಲಾ ಭೇಟಿ ನಂತರ ಪ್ರಧಾನಿ ಷರೀಫ್ , ಪಾಕ್ ನಲ್ಲಿ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಬಗ್ಗೆ, ಲಿಂಗಸಮಾನತೆ ಗಮನನೀಡುವ ಭರವಸೆ ನೀಡಿದ್ದಲ್ಲದೆ, ಮಲಾಲಾ ಪಾಕ್‍ಗೆ ಬರುವುದಾದರೆ ಸರ್ವ ರೀತಿಯ ಬೆಂಬಲ ನೀಡುವುದಾಗಿ ಹೇಳಿದರು.