ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಈ ವರ್ಷದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ 9ನೇ ಸ್ಥಾನ ಪಡೆದಿದ್ದಾರೆ.
ತನ್ನ ಆಳ್ವಿಕೆ ಯ ಮೊದಲ ವರ್ಷದಲ್ಲಿ ಭಾರತದ 7.4 ಶೇ ಜಿಡಿಪಿ ಬೆಳವಣಿಗೆಗೆ ಮೋದಿ ಕಾರಣರಾಗಿದ್ದಾರೆ.
ಒಬಾಮ ಮತ್ತು ಕ್ಸಿ ಜಿನ್‍ಪಿಂಗ್ ಭೇಟಿಯ ಮೂಲಕ ಜಾಗತಿಕ ನಾಯಕನಾಗಿ ಹೊರಹೊ ಮ್ಮಿದ್ದು, ಅವರ ಸಿಲಿಕಾನ್ ವ್ಯಾಲಿಯ ಭೇಟಿ ತಂತ್ರಜ್ಞಾನದಲ್ಲಿ ಭಾರತದ ಪಾತ್ರವನ್ನು ಬಿಂಬಿಸುತ್ತದೆ ಎಂದು ಫೋರ್ಬ್ಸ್ ಹೇಳಿದೆ.