ಅಮೆರಿಕವನ್ನು ಭಾರತ-ಚೀನಾ ದುರುಪಯೋಗ ಪಡಿಸಿಕೊಳ್ಳುತ್ತಿದೆ: ಡೊನಾಲ್ಡ್ ಟ್ರಂಪ್

ಕಮ್ಯುನಿಸ್ಟ್ ರಾಷ್ಟ್ರವಾಗಿರುವ ಚೀನಾ ಹಾಗೂ ಭಾರತ ಅಮೆರಿಕದ ಆರ್ಥಿಕ ನೀತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ...
ರಿಪಬ್ಲಿಕನ್ ಅಧ್ಯಕ್ಷೀಯ ಚರ್ಚಾಕೂಟದಲ್ಲಿ  ಮಾತನಾಡುತ್ತಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (ಫೋಟೋ ಕೃಪೆ: ಎಎಫ್ ಪಿ)
ರಿಪಬ್ಲಿಕನ್ ಅಧ್ಯಕ್ಷೀಯ ಚರ್ಚಾಕೂಟದಲ್ಲಿ ಮಾತನಾಡುತ್ತಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ (ಫೋಟೋ ಕೃಪೆ: ಎಎಫ್ ಪಿ)

ವಾಷಿಂಗ್ಟನ್: ಕಮ್ಯುನಿಸ್ಟ್ ರಾಷ್ಟ್ರವಾಗಿರುವ ಚೀನಾ ಹಾಗೂ ಭಾರತ ಅಮೆರಿಕದ ಆರ್ಥಿಕ ನೀತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ.

ರಿಪಬ್ಲಿಕನ್ ಅಧ್ಯಕ್ಷೀಯ ಚರ್ಚಾಕೂಟದಲ್ಲಿ ಮಾತನಾಡಿರುವ ಅವರು, ದುರುಪಯೋಗಪಡಿಸಿಕೊಳ್ಳುವುದರಲ್ಲಿ ಚೀನಾ ನಂ.1 ದೇಶವಾಗಿದ್ದು, ಇದರಂತೆ ಭಾರತ ಕೂಡ ಅಮೆರಿಕವನ್ನು ದುರಪಯೋಗ ಮಾಡಿಕೊಳ್ಳುತ್ತಿದೆ. ಚೀನಾ ದೇಶವೀಗ ಪ್ರಬಲ ಬಲ ಹೊಂದಿರುವ ದೇಶವಾಗಿ ನಿರ್ಮಾಣವಾಗುತ್ತಿದ್ದು, ಆರ್ಥಿಕವಾಗಿ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿದೆ ಎಂದು ಹೇಳಿದ್ದಾರೆ.

ಇಂದು ಚೀನಾ-ಭಾರತ ಹಾಗೂ ಇತರೆ ದೇಶಗಳು ನಡೆದುಕೊಳ್ಳುತ್ತಿರುವ ರೀತಿ ನೋಡುತ್ತಿದ್ದರೆ ಅಮೆರಿಕವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಚೀನಾ ತನ್ನ ಬುದ್ಧಿವಂತಿಕೆಯಿಂದ ಅಮೆರಿಕವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರಲ್ಲಿ ನಂ.1 ದೇಶವಾಗಿದೆ.

ವ್ಯಾಪಾರದಲ್ಲಿನ ಅದೃಷ್ಟವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಚೀನಾದೊಂದಿದೆ $500 ಬಿಲಿಯನ್ ನಷ್ಟು ಅಸಮತೋಲನದಲ್ಲಿದ್ದೇವೆ ಇದರಂತೆ ಕಳೆದ 1 ವರ್ಷದಿಂದಲೂ ಜಪಾನ್ ನೊಂದಿಗೆ  $75 ಬಿಲಿಯನ್ ರಷ್ಟು ಅಸಮತೋಲನದಲ್ಲಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಒಹಿಯೊ ರಾಜ್ಯಪಾಲ ಜಾನ್ ಕಸಿಚ್ ಮಾತನಾಡಿದ್ದು, ಪ್ರಸ್ತುತ ಚೀನಾ ತನ್ನ ದಕ್ಷಿಣ ಚೀನಾ ಸಮುದ್ರವನ್ನು ಆಳುವುದನ್ನು ಕಳೆದುಕೊಂಡಿದೆ. ಇದಕ್ಕಾಗಿ ಅಮೆರಿಕ ಅಧ್ಯಕ್ಷರನ್ನು ಶ್ಲಾಘಿಸಬೇಕಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಅಸ್ವಿತ್ವವನ್ನು ಕಳೆದುಕೊಂಡಿರುವ ಚೀನಾ ಅಲ್ಲಿ ತಾನೇನನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಅರ್ಥವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com