ಫ್ರಾನ್ಸ್ ನಲ್ಲಿ ರಾತ್ರಿ ಕರ್ಫ್ಯೂ ಜಾರಿ; ತುರ್ತು ಪರಿಸ್ಥಿತಿ ಮುಂದುವರೆಸುವುದಕ್ಕೆ ಕಾಯ್ದೆ

ಫ್ರಾನ್ಸ್ ನ ಕೆಲವು ಭಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಆ ಭಾಗಗಳಲ್ಲಿ ರಾತ್ರಿ ಸಮಯದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಪ್ಯಾರಿಸ್: ಫ್ರಾನ್ಸ್ ನ ಕೆಲವು ಭಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ನಂತರ ಆ ಭಾಗಗಳಲ್ಲಿ ರಾತ್ರಿ ಸಮಯದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಶುಕ್ರವಾರ ರಾತ್ರಿ ೧೦ ಘಂಟೆಗೆ (ಪ್ರಾದೇಶಿಕ ಸಮಯ) ಕರ್ಫ್ಯೂ ಜಾರಿಯಾಗಿದ್ದು ಸೋಮವಾರ ಬೆಳಗ್ಗೆ ೬ ಘಂಟೆಗೆ ಮುಕ್ತಾಯವಾಗಲಿದೆ.

ಸೆನ್ಸ್ ನಲ್ಲಿ ಮನೆಗಳ ಮೇಲೆ ದಾಳಿ ಮಾಡಿ ಅನಧಿಕೃತ ಶಸ್ತ್ರಾಸ್ತ್ರಗಳನ್ನು ಮತ್ತು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡ ನಂತರ ರಾತ್ರಿ ಕರ್ಫ್ಯೂ ವಿಧಿಸುವ ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ದಾಳಿಯ ವೇಳೆಯಲ್ಲಿ ಹಲವಾರು ಜನರನ್ನು ಬಂಧಿಸಲಾಗಿದೆ.

ನವೆಂಬರ್ ೧೩ ರಂದು ನಡೆದ ಭಯೋತ್ಪಾದನಾ ದಾಳಿಯಲ್ಲಿ ೧೨೯ ಜನ ಮೃತಪಟ್ಟು ೩೫೨ ಜನಕ್ಕೂ ಹೆಚ್ಚು ಗಾಯಗೊಂಡಿದ್ದರು. ನಂತರ ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹಾಲ್ಲೆಂಡ್ ತುರ್ತು ಪರಿಸ್ಥಿತಿ ಘೋಷಿಸಿದ್ದರು.

ಈ ತುರ್ತು ಪರಿಸ್ಥಿತಿಯನ್ನು ಇನ್ನೂ ಮೂರೂ ತಿಂಗಳುಗಳ ಕಾಲ ಮುಂದುವರೆಸಲು ಪ್ರೆಂಚ್ ಸೆನೆಟ್ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ತುರ್ತು ಪರಿಸ್ಥಿತಿಯನ್ನು ಮುಂದುವರೆಸಲು ಹೊಸ ಕಾನೂನು ಕಾಯ್ದೆಯನ್ನು ಗುರುವಾರ ಪ್ರೆಂಚ್ ರಾಷ್ಟ್ರೀಯ ಸಂಸತ್ತು ಜಾರಿ ಮಾಡಿದೆ. ಇದರ ಪರವಾಗಿ ೩೩೬ ಮತಗಳು ಬಿದ್ದರೆ ವಿರುದ್ಧವಾಗಿ ಕೇವಲ ೧೨ ಜನ ಮತ ಚಲಾಯಿಸಿದ್ದಾರೆ.

ತುರ್ತು ಪರಿಸ್ಥಿತಿ ಘೋಷಿಸಿದಾಗಲಿಂದಲೂ ೭೯೩ ಪೋಲಿಸ್ ಶೋಧನೆ ನಡೆದಿದ್ದು, ೧೭೪ ಶಸ್ತಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು ೧೬೪ ಜನರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪ್ರಧಾನಿ ಮ್ಯಾನುಯಲ್ ವಾಲ್ಸ್ ಶನಿವಾರ ಸೆನೆಟರ್ ಗಳಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com