ಮಲೇಷ್ಯಾದ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಸುಭಾಷ್ ಚಂದ್ರ ಬೋಸ್ ಹೆಸರು ನಾಮಕರಣ

ನರೇಂದ್ರ ಮೋದಿ
ನರೇಂದ್ರ ಮೋದಿ
Updated on: 

ಕೌಲಾಲಂಪುರ: ಕೌಲಾಲಂಪುರದಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರಿಡಲಾಗುವುದು ಎಂದು ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಲೇಷ್ಯಾದಲ್ಲಿರುವ ಸಾವಿರಾರು ಭಾರತೀಯರ ಪೂರ್ವಜರು ನೇತಾಜಿ ಅವರ ಭಾರತೀಯ ರಾಷ್ಟ್ರೀಯ ಸೇನೆ(ಎನ್ಐಎ) ಗೆ ಸೇರಿದ್ದರು.  ಮಲೇಷ್ಯಾದಲ್ಲಿರುವ ಭಾರತೀಯರಿಗೆ ಭಾರತ ಕೃತಜ್ಞತೆಯ ಋಣ ಹೊಂದಿದ್ದು, ಭಾರತೀಯ ಸಾಂಸ್ಕೃತಿಕ ಕೇಂದ್ರಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ಇಡಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
ಮಲೇಷ್ಯಾದಲ್ಲಿರುವ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ವೇಳೆ ಮೋದಿ ಈ ಘೋಷಣೆ ಮಾಡಿದ್ದು, ಮಲೇಷ್ಯಾದಲ್ಲಿರುವ 90 ಕ್ಕೂ ಹೆಚ್ಚು ಸಾಂಸ್ಕೃತಿಕ ಸಮುದಾಯ ಸಂಸ್ಥೆಗಳು, ಅನಿವಾಸಿ ಭಾರತೀಯರು ಮೋದಿ ಭಾಷಣ ಕೇಳಲು ನೆರೆದಿದ್ದರು.
30 ಮಿಲಿಯನ್ ಜನಸಂಖ್ಯೆಯ ಮಲೇಷ್ಯಾದಲ್ಲಿ ಎರಡು ಮಿಲಿಯನ್ ಜನರು ಭಾರತೀಯ ಮೂಲದವರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com