ರಷ್ಯಾ ವೈಮಾನಿಕ ದಾಳಿಗೆ 300 ಐಎಸ್ ಉಗ್ರರ ಸಾವು

ಕಳೆದ 24 ತಾಸುಗಳಲ್ಲಿ ನಡೆದ ವೈಮಾನಿಕ ದಾಳಿಗಳಲ್ಲಿ ರಷ್ಯದ ವಾಯುಸೇನಾ ಜೆಟ್‍ಗಳು ಸಿರಿಯಾದಲ್ಲಿರುವ ಸುಮಾರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮಾಸ್ಕೊ: ಕಳೆದ 24 ತಾಸುಗಳಲ್ಲಿ ನಡೆದ ವೈಮಾನಿಕ ದಾಳಿಗಳಲ್ಲಿ ರಷ್ಯದ ವಾಯುಸೇನಾ ಜೆಟ್‍ಗಳು ಸಿರಿಯಾದಲ್ಲಿರುವ ಸುಮಾರು 60 ಇಸ್ಲಾಮಿಕ್ ಸ್ಟೇಟ್ ವಿಭಾಗಗಳನ್ನು ಛಿದ್ರಗೊಳಿಸಿದ್ದು, ಮುನ್ನೂರಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿದೆ. 
ಈ ವಿಷಯವನ್ನು ಶುಕ್ರವಾರದಂದು ರಷ್ಯದ ರಕ್ಷಣಾ ಸಚಿವಾಲಯ ಖಚಿತಪಡಿಸಿದೆ. ಹತ್ತು ದಿನಗಳಿಂದ ಸಿರಿಯಾದ ಐಎಸ್‍ಐಎಸ್ ಉಗ್ರರ ವಿರುದ್ಧ ರಷ್ಯ ನಡೆಸುತ್ತಿರುವ ಯುದ್ಧದಲ್ಲಿ ಅತ್ಯಂತ ಪರಿಣಾಮಕಾರಿ ದಾಳಿ ಇದಾಗಿದೆ. 
ಉಗ್ರರನ್ನು ಸಂಘಟಿತವಾಗದಂತೆ, ಗುಂಪುಸೇರದಂತೆ ಮಾಡುವಲ್ಲಿ ಯಶಸ್ವಿಯಾಗುತ್ತಿರುವ ರಷ್ಯದ ಸೇನೆ ಈವರೆಗೂ ಗರಿಷ್ಟ ಹತ್ತು ತುಕಡಿಗಳನ್ನು ಮಾತ್ರ ಭೇದಿಸುವಲ್ಲಿ ಯಶಸ್ವಿಯಾಗಿತ್ತು. ಕೆಎಬಿ-500 ಎಂಬ ಪ್ರಬಲ ಬಾಂಬ್ ಬಳಸಿ ದಾಳಿಗೈದಿರುವ ಏರ್ಫೋರ್ಸ್ ಲೀವಾ ಅಲ್ ಹಕ್ ಗುಂಪನ್ನು ಪೂರ್ತಿಯಾಗಿ ನಾಶಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com