ವಿಪ್ರೊ 35 ಸಾವಿರ ಪುಸ್ತಕ ವಿತರಣೆ

ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೊ ಅಮೆರಿಕದಲ್ಲಿ ಬಡಮಕ್ಕಳಿಗೆ ನೆರವಾಗಲು ಮುಂದಾಗಿದೆ. ..
ವಿಪ್ರೊ
ವಿಪ್ರೊ
ವಾಷಿಂಗ್ಟನ್: ಭಾರತದ ಪ್ರಮುಖ ಐಟಿ ಕಂಪನಿಗಳಲ್ಲಿ ಒಂದಾದ ವಿಪ್ರೊ ಅಮೆರಿಕದಲ್ಲಿ ಬಡಮಕ್ಕಳಿಗೆ ನೆರವಾಗಲು ಮುಂದಾಗಿದೆ. 
ಉತ್ತರ ಅಮೆರಿಕದ ಐದು ನಗರಗಳಲ್ಲಿನ ಮಕ್ಕಳಿಗೆ ಅಗತ್ಯ ಪುಸ್ತಕಗಳನ್ನು ಕಂಪನಿ ನೀಡಲಿದೆ. ಈ ಉದ್ದೇಶಕ್ಕಾಗಿ ವಿಪ್ರೊ ಆದಾಯೇತರ ಸಂಸ್ಥೆ ಫಸ್ಟ್ ಬುಕ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಮಿಸ್ಸೌರಿಯ ಜೆಫರ್‍ಸನ್ ಸಿಟಿ, ಅಟ್ಲಾಂಟ, ಹ್ಯೂಸ್ಟನ್, ನ್ಯೂಜೆರ್ಸಿಯ ಈಸ್ಟ್ ಬ್ರನ್ಸ್‍ವಿಕ್, ಕೆನಡಾದ ಎಡ್‍ಮಾಂಟನ್‍ಗಳಲ್ಲಿ ಪುಸ್ತಕಗಳನ್ನು ನೀಡಲಿದೆ. 
ಬಡ ಮಕ್ಕಳು ಮತ್ತು ಯುವಕರಿಗೆ ಉತ್ತಮ ಪಠ್ಯ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿಯ ಮುಖ್ಯ ಸುಸ್ಥಿರ ಮೇಲ್ವಿಚಾರಣಾ ಅಧಿಕಾರಿ ಅನುರಾಗ್ ಬೆಹರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com