ರಮಾಲ್ಲಾ: ಕೆಲವು ತಿಂಗಳ ಹಿಂದೆ ಇರಾಕ್‍ನಲ್ಲಿ ನಾಪತ್ತೆಯಾಗಿದ್ದ 38 ಭಾರತೀಯರು ಜೀವಂತವಾಗಿರಬಹುದೆನ್ನುವ ನಿರೀಕ್ಷೆ ಮತ್ತೆ ಗರಿಗೆದರಿದೆ.
ನಾಪತ್ತೆಯಾಗಿರುವ ಭಾರತೀಯರೆಲ್ಲರೂ ಜೀವಂತವಾಗಿದ್ದಾರೆ ಎಂದು ಪ್ಯಾಲೆಸ್ತೀನ್ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಹೇಳಿದ್ದಾರೆ. ಈ ವಿಚಾರವನ್ನು ಅವರು ಪ್ಯಾಲೆಸ್ತೀನ್ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಬ್ಬಾಸ್ ತಿಳಿಸಿದ್ದಾರೆ.
ಆದರೆ, ಆ ಕುರಿತು ಈವರೆಗೆ ಯಾವುದೇ ದಾಖಲೆ ನೀಡಿಲ್ಲ. ನಾಪತ್ತೆಯಾಗಿರುವ 38 ಭಾರತೀಯರನ್ನು ಐಎಸ್ ಉಗ್ರರು ಇರಾಕ್ ನ ಮೊಸೂಲ್‍ನಲ್ಲಿಟ್ಟಿದ್ದಾರೆ ಎನ್ನಲಾಗಿದೆ.