

ಗ್ರೀಸ್: ಗ್ರೀಕ್ ಏಜಿಯನ್ ಸಮುದ್ರ ಮಾರ್ಗದ ಮೂಲಕ ಸಾಗುತ್ತಿದ್ದ ಸಿರಿಯಾದ ನಿರಾಶ್ರಿತರಿದ್ದ ಎರಡು ದೋಣಿಗಳು ಮುಳುಗಿದ ಪರಿಣಾಮ 22 ಮಂದಿ ಸಾವನ್ನಪ್ಪಿರುವ ಘಟನೆ ಪೂರ್ವ ಎಜಿಯನ್ ಸಮುದ್ರದಲ್ಲಿ ಶುಕ್ರವಾರ ನಡೆದಿದೆ.
ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿನ ಜನತೆ ಗ್ರೀಕ್ ಕಡೆಗೆ ವಲಸೆ ಹೋಗಲು ಆರಂಭಿಸಿದ್ದು, ಗ್ರೀಕ್ ಜಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ದುರಂತಗಳಲ್ಲೊಂದಾದ ದೋಣಿ ದುರಂತದಲ್ಲಿ 19 ಮಂದಿ ಸಾವನ್ನಪ್ಪಿದ್ದು, 198 ಮಂದಿಯನ್ನು ಕಲ್ಮಿನೋಸ್ ದ್ವೀಪದ ಬಳಿ ನೌಕಾ ಪಡೆಯ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಇನ್ನುಳಿದ ಇತರ ಮೂವರು ಮತ್ತು 6 ಜನರು ಸಿರಿಯಿನ್ ನಿರಾಶ್ರಿತರು ರೋಡ್ ದ್ವೀಪದ ಸಮೀಪ ನಡೆದ ಪ್ರತ್ಯೇಕ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಸಿರಿಯನ್ ನಿರಾಶ್ರಿತರಿದ್ದ ಈ ದೋಣಿಗಳು ಗ್ರೀಕ್ ದ್ವೀಪ ಪ್ರವೇಶಿಸುತ್ತಿದ್ದಂತೆ ಗಾಳಿ ಬಡಿತ ಹೆಚ್ಚಾದ ಕಾರಣ ದೋಣಿ ಮುಚಿಸಿ ಬಿದ್ದು ದುರುಂತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ