

ವಾಷಿಂಗ್ಟನ್: ಇನ್ನು ಮುಂದೆ ಮದುವೆಯಾಗಿರುವ ಮಹಿಳೆಯರು ಕೆಲಸಕ್ಕೆ ಹೋಗಬೇಕೆಂದರೆ ಪತಿ ಅನುಮತಿ ಪಡೆಯಬೇಕಂತೆ. ಹೌದು, ಹೀಗಂತ ಹೇಳಿರುವುದು ವಿಶ್ವ ಬ್ಯಾಂಕ್.
ವಿಶ್ವದ 18 ರಾಷ್ಟ್ರಗಳಲ್ಲಿ ಮಹಿಳೆಯರು ಕೆಲಸಕ್ಕೆ ಹೋಗಲು ಇನ್ನೂ ತಮ್ಮ ಪತಿಯರರಿಂದ ಅನುಮತಿ ಪಡೆಯಬೇಕಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಮಹಿಳೆಯರು ಹೊರಗಡೆ ದುಡಿಯಲು ಹೋಗಬೇಕಾದರೆ ತಮ್ಮ ಪತಿಯರಿಂದ ಇನ್ನೂ ಅನುಮತಿ ಪಡೆಯಬೇಕಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ಬಹಿರಂಗಗೊಳಿಸಿದ್ದಾರೆ.
'ವುಮೆನ್ ಬ್ಯುಸಿನೆಸ್ ಅಂಡ್ ಲಾ 2016' ವರದಿ ಪ್ರಕಾರ 173 ದೇಶಗಳಲ್ಲಿ 100 ದೇಶಗಳ ಮಹಿಳೆಯರಿಗೆ ಉದ್ಯೋಗ ಮಾಡುವುದನ್ನೆ ನಿಷೇದಿಸಲಾಗಿದೆ ಎಂದು ತಿಳಿಸಿದ ಅವರು ವಿಶ್ವದ 18 ರಾಷ್ಟ್ರಗಳಲ್ಲಿ ಇನ್ನೂ ಮಹಿಳೆಯರು ಕೆಲಸಕ್ಕೆ ಹೋಗಲು ಪತಿಯರರಿಂದ ಅನುಮತಿ ಪಡೆಯಬೇಕಿದೆ ಎಂದು ಹೇಳಿದ್ದಾರೆ.
ಅದರಲ್ಲಿ 41 ದೇಶಗಳಲ್ಲಿ ಮಹಿಳೆಯರು ತಮ್ಮ ಯೋಗ್ಯತೆಗೂ ಮೀರಿ ವಿವಿಧ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.29 ದೇಶಗಳಲ್ಲಿ ಮಹಿಳೆಯರು ರಾತ್ರಿ ವೇಳೆ ಕೆಲಸ ಮಾಡುವಂತಿಲ್ಲ ಎಂದು ವಿವರಿಸಿದ್ದಾರೆ.