ಪಾಕ್ ವಾಯು ನೆಲೆ ಮೇಲೆ ತಾಲಿಬಾನ್ ಉಗ್ರರ ದಾಳಿ, 30 ಸಾವು

ಪಾಕಿಸ್ತಾನ ವಾಯು ನೆಲೆ ಮೇಲೆ ಶುಕ್ರವಾರ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ದಾಳಿಯ ವೇಳೆ ಮಸೀದಿಯಲ್ಲಿದ್ದ 16 ಮಂದಿಯನ್ನು ಹತ್ಯೆ ಮಾಡಲಾಗಿದೆ....
ಪ್ರತಿ ದಾಳಿ ನಡೆಸುತ್ತಿರುವ ಪಾಕ್ ಸೇನೆ(ಚಿತ್ರ ಎಪಿ)
ಪ್ರತಿ ದಾಳಿ ನಡೆಸುತ್ತಿರುವ ಪಾಕ್ ಸೇನೆ(ಚಿತ್ರ ಎಪಿ)

ಪೇಶಾವರ: ಪಾಕಿಸ್ತಾನ ವಾಯು ನೆಲೆ ಮೇಲೆ ಶುಕ್ರವಾರ ತಾಲಿಬಾನ್ ಉಗ್ರರು ದಾಳಿ ಮಾಡಿದ್ದು, ದಾಳಿಯ ವೇಳೆ ಮಸೀದಿಯಲ್ಲಿದ್ದ 16 ಮಂದಿಯನ್ನು ಹತ್ಯೆ ಮಾಡಲಾಗಿದೆ. ಅಲ್ಲದೆ ಪ್ರತಿದಾಳಿಯಲ್ಲಿ 13 ಉಗ್ರರರನ್ನು ಪಾಕ್ ಸೇನೆ ಹತ್ಯೆ ಮಾಡಿದೆ.

ಸ್ಫೋಟಕಗಳನ್ನು ಹೊಂದಿದ್ದ ಜಾಕೇಟ್ ಧರಿಸಿ, ಎಕೆ47 ರೈಫಲ್ ಹೊಂದಿದ್ದ ಉಗ್ರರ ತಂಡ ಪೇಶಾವರದ ಹೊರವಲಯದಲ್ಲಿರುವ ಬಡಾಬೇರ್ ವಾಯನೆಲೆ ಮೇಲೆ ದಾಳಿ ನಡೆಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸೇನಾ ವಕ್ತಾರ ಮೇಜರ್ ಜನರಲ್ ಅಸಿಮ್ ಬಜ್ವಾ ಅವರು, ವಾಯುಪಡೆಯ ಕ್ಯಾಂಪ್‌ನಲ್ಲಿರುವ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ 16 ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಆಸ್ಪತ್ರೆಯ ವೈದ್ಯರು, ಮತ್ತೊಂದು ಅಪರಿಚಿತ ಮೃತದೇಹ ಬಂದಿರುವುದಾಗಿ ಹೇಳಿದ್ದಾರೆ.

ಉಗ್ರರು ವಿವಿಧ ತಂಡಗಳಲ್ಲಿ ಎರಡು ಕಡೆಯಿಂದ ವಾಯುನೆಲೆಯನ್ನು ಪ್ರವೇಶಿಸಿದ್ದಾರೆ. ಈ ವೇಳೆ ಸೇನಾಪಡೆ ಹಾಗೂ ಉಗ್ರರ ನಡುವೆ ಭಾರಿ ಗುಂಡಿನ ಚಕಮಕಿ ನಡೆಯಿತು ಎಂದು ಬಜ್ವಾ ಹೇಳಿದ್ದಾರೆ. ಅಲ್ಲದೆ ಘಟನೆಯಲ್ಲಿ ಎಂಟು ಸೈನಿಕರು ಹಾಗೂ ಇಬ್ಬರು ಹಿರಿಯ ಅಧಿಕಾರಿಗಳು ಸೇರಿದಂತೆ ಕನಿಷ್ಠ 22 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಮಧ್ಯೆ, ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ(ಟಟಿಪಿ) ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. 'ನಮ್ಮ ಆತ್ಮಾಹುತಿ ಘಟಕ ಈ ದಾಳಿ ನಡೆಸಿದೆ' ಎಂದು ಟಿಟಿಪಿ ವಕ್ತಾರ ಮುಹಮ್ಮದ್ ಖುರಸಾನಿ ಇ-ಮೇಲ್ ಮೂಲಕ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com