ದಲೈಲಾಮಾ ಗೆ ಆಕರ್ಷಕ, ಸುಂದರ ಮಹಿಳಾ ಉತ್ತರಾಧಿಕಾರಿ ಬೇಕಂತೆ!

ಸ್ಪುರದ್ರೂಪಿ ಹಾಗೂ ಆಕರ್ಷಕ ಮಹಿಳೆ ತಮ್ಮ ಮುಂದಿನ ಉತ್ತರಾಧಿಕಾರಿಯಾಗಬೇಕು ಎಂದು ಆಧ್ಯಾತ್ಮಿಕ ನಾಯಕ ದಲೈ ಲಾಮಾ ಹೇಳಿದ್ದಾರೆ...
ದಲೈ ಲಾಮಾ
ದಲೈ ಲಾಮಾ

ವಾಷಿಂಗ್ಟನ್ ಡಿಸಿ: ಸ್ಪುರದ್ರೂಪಿ ಹಾಗೂ ಆಕರ್ಷಕ ಮಹಿಳೆ ತಮ್ಮ ಮುಂದಿನ ಉತ್ತರಾಧಿಕಾರಿಯಾಗಬೇಕು ಎಂದು ಆಧ್ಯಾತ್ಮಿಕ ನಾಯಕ ದಲೈ ಲಾಮಾ ಹೇಳಿದ್ದಾರೆ.

ಖಾಸಗಿ ಟಿವಿ ವಾಹಿನಿಗೆ ನೀಡಿದ  ಸಂದರ್ಶನದಲ್ಲಿ 80 ವರ್ಷ ವಯಸ್ಸಿನ ದಲೈ ಲಾಮಾ ತಮ್ಮ ಉತ್ತರಾಧಿಕಾರಿ ಮಹಿಳೆಯಾಗಿರಬೇಕು. ಏಕೆಂದರೆ ಪುರುಷನಿಗಿಂತ ಮಹಿಳೆ ಪ್ರೀತಿ ಹೆಚ್ಚಾಗಿ ತೋರಿಸುತ್ತಾಳೆ ಎಂದು ಅವರು ತಮ್ಮ ಉತ್ತರಾಧಿಕಾರಿ ತುಂಬಾ ಆಕರ್ಷಕವಾಗಿರಬೇಕು ಎಂದು ಹೇಳಿದ್ದಾರೆ.

ದಲೈ ಲಾಮಾ ತಾವೊಬ್ಬ ಸ್ತ್ರೀಸಮಾನಾತವಾದಿಯಾಗಿದ್ದು ತಮ್ಮ ಮುಂದಿನ ಉತ್ತರಾಧಿಕಾರಿ ಮಹಿಳೆಯಾಗಿರುತ್ತಾರೆ ಎಂಬುದರ ಬಗ್ಗೆ ಸುಳಿವು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com