ಹಜ್ ಯಾತ್ರೆ ಕಾಲ್ತುಳಿತದಲ್ಲಿ ಓರ್ವ ಭಾರತೀಯ ಮಹಿಳೆ ಸಾವು

ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದ ಮಸೀದಿ ಬಳಿ ಹಜ್ ಯಾತ್ರೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
Updated on: 

ಹೈದರಾಬಾದ್: ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದ ಮಸೀದಿ ಬಳಿ ಹಜ್ ಯಾತ್ರೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತಪಟ್ಟ ಮಹಿಳೆ ತೆಲಂಗಾಣದ ಮೂಲದವರಾಗಿದ್ದು, ಈ ಘಟನೆಯನ್ನು ತೆಲಂಗಾಣ ರಾಜ್ಯ ಹಜ್ ಸಮಿತಿ ಐಎಎನ್ಎಸ್ ಗೆ ಸ್ಪಷ್ಟಪಡಿಸಿದ್ದಾರೆ. ಮೃತರನ್ನು ಬಿಬಿಜಾನ್ ಎಂದು ಗುರುತಿಸಲಾಗಿದ್ದು ಹೈದರಾಬಾದ್ ಬಳಿಯ ರಂಗಾರೆಡ್ಡಿ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ.    
ಘಟನೆ ಸಂಬಂಧ ವಿದೇಶಾಂಗ ಸಚಿವಾಲಯ ಹೆಲ್ಪಲೈನ್ ನಂಬರ್- 009661254580000 ಬಿಡುಗಡೆ ಮಾಡಿದೆ. ಭಾರತೀಯರು ಮೃತಪಟ್ಟಿರುವ ಬಗ್ಗೆ ಮಾಹಿತಿ ಇಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದ ಬೆನ್ನಲ್ಲೇ ತೆಲಂಗಾಣ ಹಜ್ ಸಮಿತಿ ಓರ್ವ ಮಹಿಳೆ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com