ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಸ್ಪರ್ಧಿಸುತ್ತಿರುವ ಡೊನಾಲ್ಡ್ ಟ್ರಂಪ್ 5 ರಾಜ್ಯಗಳ ಪ್ರೈಮರಿಗಳಲ್ಲಿ ವಿಜಯ ಸಾಧಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗುವುದಕ್ಕಾಗಿ ಸ್ಪರ್ಧಿಸುತ್ತಿರುವ ಹಿಲರಿ ಕ್ಲಿಂಟನ್ ಮೂರು ಸ್ಥಾನಗಳನ್ನು ಗೆದ್ದು ಕೊಂಡಾಗ ರೋಡ್ ಐಲ್ಯಾಂಡ್‌ನಲ್ಲಿ ಪ್ರತಿಸ್ಪರ್ಧಿಯಾದ ಸಾಂಡೇರ್ಸ್ ಗೆಲವು ಸಾಧಿಸಿದರು.
ಮೇರಿಲ್ಯಾಂಡ್, ಕನೆಕ್ಟಿಕಟ್, ಡೇಲಾವೇರ್, ಪೆನ್‌ಸ್ಲೇವಿಯಾ ಮತ್ತು ರೋಡ್ ಐಲ್ಯಾಂಡ್ ನಲ್ಲಿ ಟ್ರಂಪ್ ವಿಜಯ ಸಾಧಿಸಿದ್ದಾರೆ.
ಅಭ್ಯರ್ಥಿ ಸ್ಥಾನ ಗಿಟ್ಟಿಸಿಕೊಳ್ಳಲು ಟ್ರಂಪ್‌ಗೆ 1237 ಪ್ರತಿನಿಧಿಗಳ ಬೆಂಬಲ ಬೇಕಾಗಿದ್ದು, ಇಲ್ಲಿಯವರೆಗೆ 944 ಪ್ರತಿನಿಧಿಗಳ ಬೆಂಬಲವನ್ನು ಟ್ರಂಪ್ ಗಿಟ್ಟಿಸಿಕೊಂಡಿದ್ದಾರೆ. 559 ಪ್ರತಿನಿಧಿಗಳ ಬೆಂಬಲವಿರುವ ಟೆಡ್ ಕ್ರೂಸ್‌ಗಿಂತ ಹೆಚ್ಚಿನ ಬಹುಮತವನ್ನು ಟ್ರಂಪ್ ಹೊಂದಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಮತ್ತು ಬೆರ್ನಿ ಸಾಂಡೇರ್ಸ್ ನಡುವೆ ಸಮಬಲದ ಪೈಪೋಟಿ ನಡೆಯುತ್ತಿದೆ.
ರಿಪಬ್ಲಿಕನ್ ಪಕ್ಷ ಮತ್ತು ಡೆಮಾಕ್ರಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕಾಗಿ ನಡೆಯುತ್ತಿರುವ ಚುನಾವಣೆಯಾಗಿದೆ ಈ ಪ್ರೈಮರಿ ಚುನಾವಣೆ.