ಫಿಡೆಲ್ ಕ್ಯಾಸ್ಟ್ರೊ 90ನೇ ಹುಟ್ಟುಹಬ್ಬಕ್ಕೆ 90 ಮೀಟರ್ ಉದ್ದದ ಸಿಗಾರ್ ಅರ್ಪಣೆ

ಜನಪ್ರಿಯ ಕ್ಯೂಬಾ ಸಿಗಾರ್ ಸುತ್ತುಗಾರ ಜೋಸ್ ಕ್ಯಾಸ್ಟೆಲ್ಲಾರ್ ಅವರು 90 ಮೀಟರ್ ಸಿಗಾರ್ ಸುತ್ತುವ ಮೂಲಕ ತಮ್ಮದೇ ಹಿಂದಿನ ದಾಖಲೆಯನ್ನು ಮುರಿದು ಅದನ್ನು ಕ್ಯೂಬಾದ ಮಾಜಿ ರಾಷ್ಟ್ರಪತಿ ಫಿಡೆಲ್
ಫಿಡೆಲ್ ಕ್ಯಾಸ್ಟ್ರೊ 90 ನೇ ಹುಟ್ಟುಹಬ್ಬಕ್ಕೆ 90 ಮೀಟರ್ ಉದ್ದದ ಸಿಗಾರ್ ಅರ್ಪಣೆ
ಫಿಡೆಲ್ ಕ್ಯಾಸ್ಟ್ರೊ 90 ನೇ ಹುಟ್ಟುಹಬ್ಬಕ್ಕೆ 90 ಮೀಟರ್ ಉದ್ದದ ಸಿಗಾರ್ ಅರ್ಪಣೆ
ಹವಾನಾ: ಜನಪ್ರಿಯ ಕ್ಯೂಬಾ ಸಿಗಾರ್ ಸುತ್ತುಗಾರ ಜೋಸ್ ಕ್ಯಾಸ್ಟೆಲ್ಲಾರ್ ಅವರು 90 ಮೀಟರ್ ಸಿಗಾರ್ ಸುತ್ತುವ ಮೂಲಕ ತಮ್ಮದೇ ಹಿಂದಿನ ದಾಖಲೆಯನ್ನು ಮುರಿದು ಅದನ್ನು ಕ್ಯೂಬಾದ ಮಾಜಿ ರಾಷ್ಟ್ರಪತಿ ಫಿಡೆಲ್ ಕ್ಯಾಸ್ಟ್ರೊ ಅವರ 90 ನೇ ಹುಟ್ಟುಹಬ್ಬಕ್ಕೆ ಅರ್ಪಿಸಿದ್ದಾರೆ. 
10 ದಿನಗಳ ಶ್ರಮದ ಕೆಲಸದಲ್ಲಿ, ವಿಶ್ವ ದಾಖಲೆಗಳ ಸರದಾರ ಕ್ಯಾಸ್ಟೆಲ್ಲಾರ್ ಈ ಹೊಸ ಸಾಧನೆಯನ್ನು ಮಾಡಿದ್ದು ಅತಿಥಿಗಳ ಮುಂದೆ ಸಿಗಾರ್ ನ ಕೊನೆಯ ಕೆಲವು ಸೆಂಟಿಮೀಟರ್ ಗಳನ್ನು ಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 
"ಫಿಡೆಲ್ ಕ್ಯಾಸ್ಟ್ರೊ ಅವರ 90ನೇ ಹುಟ್ಟುಹಬ್ಬಕ್ಕೆ ಅರ್ಪಿಸುತ್ತಿರುವ ಈ ಹೊಸ ದಾಖಲೆಯಿಂದ ಹೆಮ್ಮೆ ಎನ್ನಿಸುತ್ತಿದೆ. ಅವರು ಕಳೆದ 50 ವರ್ಷಗಳಿಂದ ನಮ್ಮ ಸಲಹೆಗಾರ ಮತ್ತು ನಾವು ಇದು ಸುಖಿಸುತ್ತಿರುವ ಸ್ವಾತಂತ್ರ್ಯಕ್ಕಾಗಿ ತಮ್ಮನ್ನೇ ಮುಡುಪಾಗಿಟ್ಟವರು" ಎಂದು ಕ್ಯಾಸ್ಟೆಲ್ಲಾರ್ ಹೇಳಿದ್ದಾರೆ. 
90 ಮೀಟರ್ ಗಿಂತಲೂ ಉದ್ದದ ಸಿಗಾರ್ ಅನ್ನು ಸುತ್ತಿದ್ದರು ಈ ಸಂದರ್ಭದ ಸಂಭ್ರಮಕ್ಕಾಗಿ ಅದನ್ನು 90 ಮೀಟರ್ ಉದ್ದಕ್ಕೆ ಕತ್ತರಿಸಲಾಗಿದೆ. "ಇದು ನಮಗೆ ದೊಡ್ಡ ದಿನ ಮತ್ತು ಎಲ್ಲ ಕ್ಯೂಬನ್ ಸಿಗಾರ್ ಸುತ್ತುವವರಿಗೂ ಏಕೆಂದರೆ ನಮ್ಮ ಅತಿ ಜನಪ್ರಿಯ ಉತ್ಪನ್ನದೊಂದಿಗೆ ದೇಶಕ್ಕೆ ಗೌರವ ತಂದಿದ್ದೇವೆ" ಎಂದು ಕೂಡ ಅವರು ಹೇಳಿದ್ದಾರೆ. 
ಈ ದೈತ್ಯ ಸಿಗಾರ್ ಮಾಡಲಿ 80 ಕೆಜಿ ಒಣ ಹೊಗೆಸೊಪ್ಪಿನ ಎಲೆಗಳನ್ನು ಬಳಸಲಾಗಿದೆ. ಹವಾನದಲ್ಲಿ ಬೆಳೆಯುವ ಈ ಹೊಗೆಸೊಪ್ಪು ವಿಶ್ವದಲ್ಲೇ ಅತಿ ಹೆಚ್ಚು ಜನಪ್ರಿಯ. ಕ್ಯಾಸ್ಟೆಲ್ಲಾರ್ ಅವರ ಹಿಂದಿನ ದಾಖಲೆ 81.8 ಮೀಟರ್ ಉದ್ದದ ಸಿಗಾರ್. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com