ಉಗ್ರರ ಕಪಿಮುಷ್ಠಿಯಿಂದ ಕುಂದಝ್ ಪ್ರಾಂತ್ಯವನ್ನು ಮರಳಿ ಪಡೆದ ಅಫ್ಘಾನ್ ಸೇನೆ

ತಾಲಿಬಾನ್ ಉಗ್ರರ ವಶವಾಗಿದ್ದ ಅಫ್ಘಾನಿಸ್ತಾನದ ಕುಂದಝ್ ಪ್ರಾಂತ್ಯವನ್ನು ಅಲ್ಲಿನ ಸೇನೆ ಮರಳಿ ವಶಕ್ಕೆ ಪಡೆದುಕೊಂಡಿದೆ.
ತಾಲೀಬಾನ್ ಉಗ್ರರು
ತಾಲೀಬಾನ್ ಉಗ್ರರು

ಕಾಬುಲ್: ತಾಲಿಬಾನ್ ಉಗ್ರರ ವಶವಾಗಿದ್ದ ಅಫ್ಘಾನಿಸ್ತಾನದ ಕುಂದಝ್ ಪ್ರಾಂತ್ಯವನ್ನು ಅಲ್ಲಿನ ಸೇನೆ ಮರಳಿ ವಶಕ್ಕೆ ಪಡೆದುಕೊಂಡಿದೆ.

ಆ.20 ರ ಮಧ್ಯಾಹ್ನದ ವೇಳೆಗೆ ಸೇನಾಪಡೆಗಳು ಭಯೋತ್ಪಾದಕರ ವಿರುದ್ಧ ದಾಳಿ ನಡೆಸಿದ್ದು, ರಾತ್ರಿ ವೇಳೆಗೆ ಕುಂದಝ್ ಪ್ರಾಂತ್ಯವನ್ನು ಉಗ್ರರ ಕಪಿಮುಷ್ಟಿಯಿಂದ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಗುಂಡಿನ ಚಕಮಕಿಯಲ್ಲಿ 23 ಉಗ್ರರನ್ನು ಹತ್ಯೆ ಮಾಡಲಾಗಿದ್ದು 30 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಪ್ರಾಂತ್ಯದ ಮುಖ್ಯಸ್ಥ ಮೊಹಮ್ಮದ್ ಖಾಸಿಂ ಜಂಗಲ್ ಬಾಘ್ ತಿಳಿಸಿದ್ದಾರೆ.

ಶನಿವಾರದಂದು ಕುಂದಝ್ ಪ್ರಾಂತ್ಯದ ಮೇಲೆ ದಾಳಿ ನಡೆಸಿದ್ದ ಉಗ್ರರು, ಅಲ್ಲಿನ ಸರ್ಕಾರಿ ಕಟ್ಟಡಗಳನ್ನು ವಶಪಡಿಸಿಕೊಂಡಿದ್ದರು. ಉಗ್ರರು ದಾಳಿ ನಡೆಸಿದ ಪ್ರದೇಶ ನೆರೆಯ ಪ್ರಾಂತ್ಯ ತಾಖಾರ್ ಗೆ ಸಂಪರ್ಕಿಸುವ ಹೆದ್ದಾರಿಯನ್ನು ಹೊಂದಿದ್ದರಿಂದ ಮತ್ತಷ್ಟು ಅಂತಕ ಉಂಟಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com