ಅಮೆರಿಕಾದಲ್ಲಿ 9 ವರ್ಷದ ಬಾಲಕಿ ನಿಗೂಢ ಸಾವು: ಮಲತಾಯಿ ವಿಚಾರಣೆ

ನ್ಯೂಯಾರ್ಕ್ ನ ಮನೆಯಲ್ಲಿ 9 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ್ದು, ಪೊಲೀಸರು ಆಕೆಯ ಮಲತಾಯಿಯನ್ನು ವಿಚಾರಣೆಗೊಳಪಡಿಸಿದ್ದಾರೆ...
ಮೃತ ಬಾಲಕಿ ಆಶಾದೀಪ್
ಮೃತ ಬಾಲಕಿ ಆಶಾದೀಪ್

ನ್ಯೂಯಾರ್ಕ್: ನ್ಯೂಯಾರ್ಕ್ ನ ಮನೆಯಲ್ಲಿ 9 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ್ದು, ಪೊಲೀಸರು ಆಕೆಯ ಮಲತಾಯಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

ಆಶಾದೀಪ್ ಕೌರ್ ಮೂರು ತಿಂಗಳ ಹಿಂದೆ ನ್ಯೂಯಾರ್ಕ್ ಗೆ ತೆರಳಿ ಕ್ವೀನ್ಸ್ ರೋಡ್ ನಲ್ಲಿರುವ ತನ್ನ ತಂದೆ ಸುಖ್ಜೀಂದರ್ ಸಿಂಗ್ ಗೆ ಸೇರಿದ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದಳು. ಅಲ್ಲಿ ಆಕೆಯ ಮಲತಾಯಿ ಅರ್ಜುನ್ ಸಮ್ದಿ ಪರ್ದಾಸ್ ಕೂಡ ಇದ್ದಳು.

ಮನೆಯ ಬಾತ್ ಟಬ್ ನಲ್ಲಿ ಆಕೆಯ ಶವ ಪತ್ತೆಯಾಗಿದ್ದು, ದೇಹದ ಮೇಲೆ ಮೂಗೇಟು ಬಿದ್ದಿರುವ ಗುರುತು ಪತ್ತೆಯಾಗಿದೆ. ಆಶಾದೀಪ್ ಮತ್ತು ಅರ್ಜುನ್ ಸಮ್ದಿ ಪರ್ದಾಸ್ ಇಬ್ಬರು ಒಟ್ಟಿಗೆ ಬಾತ್ ರೂಂ ಗೆ ಹೋಗಿದ್ದನ್ನು ಮನೆ ಕೆಲಸದಾಕೆ ನೋಡಿದ್ದಾಗಿ ಹೇಳಿದ್ದಾಳೆ.

ಸ್ವಲ್ಪ ಹೊತ್ತಿನ ನಂತರ ಮಲತಾಯಿ ಬಾತ್ ರೂಂ ನಿಂದ ಬಂದು ಮನೆಯಿಂದ ಎಲ್ಲೊ ಹೊರಗೆ ಹೊರಟು ಹೋದಳು. ಎಷ್ಟೇ ಹೊತ್ತಾದರೂ ಆಶಾ ದೀಪ್ ಬಾತ್ ರೂಂ ನಿಂದ ಬಾರದ ಕಾರಣ ಮನೆಕೆಲಸದಾಕೆ ಒಳ ಹೋಗಿ ನೋಡಿದಾಗ ಬಾತ್ ಟಬ್ ನಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಬಾತ್ ಟಬ್ ನಲ್ಲಿ ನೀರು ಇರಲಿಲ್ಲ ಎಂದು ಆಕೆ ತಿಳಿಸಿದ್ದಾಳೆಂದು ನ್ಯೂಯಾರ್ಕ್ ಪತ್ರಿಕೆಯೊಂದು ವರದಿ ಮಾಡಿದೆ.

ಬಾಲಕಿಯ ತಾಯಿ ಮತ್ತು ಆಕೆಯ ತಂದೆಗೂ ವಿಚ್ಛೇದನವಾಗಿದ್ದು, ಬಾಲಕಿಗೆ ಮಲತಾಯಿ ಕಿರುಕುಳ ನೀಡುತ್ತಿದ್ದಳು ಎಂದು ಮೃತ ಬಾಲಕಿಯ ಸಂಬಂಧಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಲತಾಯಿಯನ್ನು ವಶಕ್ಕೆ ಪಡೆದಿರುವ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com