ಆಫ್ಘನಿಸ್ತಾನದಲ್ಲಿ ಆತ್ಮಾಹುತಿ ದಾಳಿ, 3 ಸೈನಿಕರ ಸಾವು

ಆಫ್ಘಾನಿಸ್ತಾನದ ಬಾಲ್ಖಾ ಪ್ರಾಂತ್ಯದಲ್ಲಿನ ಮಝುರ್ ಇ ಷರೀಫ್​ನಲ್ಲಿರುವ ರಾಷ್ಟ್ರೀಯ ಆರ್ಮಿ ಕೇಂದ್ರ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು ಘಟನೆಯಲ್ಲಿ ಮೂವರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಾಬೂಲ್: ಆಫ್ಘಾನಿಸ್ತಾನದ ಬಾಲ್ಖಾ ಪ್ರಾಂತ್ಯದಲ್ಲಿನ ಮಝುರ್ ಇ ಷರೀಫ್​ನಲ್ಲಿರುವ ರಾಷ್ಟ್ರೀಯ ಆರ್ಮಿ ಕೇಂದ್ರ ಬಳಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು ಘಟನೆಯಲ್ಲಿ ಮೂವರು ಸೈನಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಸೇನಾ ಬಸ್ ಅನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದ್ದು, ಘಟನೆಯಲ್ಲಿ ಸುಮಾರು 18  ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸರ್ಕಾರದ ವಕ್ತಾರ ಮುನೀರ್ ಅಹ್ಮದ್ ಪರ್ಹಾದ್ ಹೇಳಿದ್ದಾರೆ.

ಆಫ್ಘನಿಸ್ತಾನ್ ಸೇನಾ ಕೇಂದ್ರವನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ಈಗಾಗಲೇ ತಾಲಿಬಾನ್ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಇತ್ತೀಚೆಗೆ ಆಪ್ಘನ್ ನಲ್ಲಿ ತಾಲಿಬಾನ್ ಉಗ್ರರ ದಾಳಿ ಹೆಚ್ಚಿದ್ದು, ನೂರಾರು ಮಂದಿ ಅಮಾಯಕರು ಉಗ್ರರಿಗೆ ಬಲಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com