ರಷ್ಯಾದಲ್ಲಿ ಪ್ರಬಲ ಭೂಕಂಪನ; ರಿಕ್ಚರ್ ಮಾಪಕದಲ್ಲಿ 7ರಷ್ಟು ತೀವ್ರತೆ ದಾಖಲು

ಪೂರ್ವ ರಷ್ಯಾದಲ್ಲಿ ಶನಿವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ಯಷ್ಚು ತೀವ್ರತೆ ದಾಖಲಾಗಿದೆ...
ಪೂರ್ವ ರಷ್ಯಾದಲ್ಲಿ ಪ್ರಬಲ ಭೂಕಂಪನ (ಸಂಗ್ರಹ ಚಿತ್ರ)
ಪೂರ್ವ ರಷ್ಯಾದಲ್ಲಿ ಪ್ರಬಲ ಭೂಕಂಪನ (ಸಂಗ್ರಹ ಚಿತ್ರ)
Updated on: 

ಮಾಸ್ಕೋ: ಪೂರ್ವ ರಷ್ಯಾದಲ್ಲಿ ಶನಿವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ  7.0ಯಷ್ಚು ತೀವ್ರತೆ ದಾಖಲಾಗಿದೆ.

ಪೂರ್ವ ರಷ್ಯಾದ ಯೆಲಿಜೋವೋ ನಗರದಿಂದ ಈಶಾನ್ಯ ಭಾಗಕ್ಕೆ 95 ಕಿ.ಮೀ ದೂರದಲ್ಲಿ 160 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಹವಮಾನ ಇಲಾಖೆ ಹೇಳಿದೆ. ಫೆಸಿಫಿಕ್  ಮಹಾಸಾಗರದಲ್ಲಿರುವ ಭೂಕಂಪ ವಲಯಕ್ಕೆ ಈ ಪ್ರದೇಶ ಹತ್ತಿರದಲ್ಲಿದ್ದು, ಈ ಅಗ್ನಿ ವಲಯ ವ್ಯಾಪ್ತಿ ಪ್ರದೇಶವು ಪದೇ ಪದೇ ಭೂಕಂಪಕ್ಕೆ ತುತ್ತಾಗುವ ಅಪಾಯವನ್ನು ಹೊಂದಿದೆ. ಇದೇ ವೇಳೆ   ಭೂಕಂಪನದಿಂದಾಗಿ ಸುನಾಮಿ ಅಲೆಗಳೇಳುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಭೂಕಂಪನದಿಂದ ಸಂಭವಿಸಿರುವ ಹಾನಿಗಳ ಕುರಿತು ವರದಿ ಬಂದಿಲ್ಲ ಎಂದು  ರಾಷ್ಟ್ರೀಯ ಮತ್ತು ಫೆಸಿಫಿಕ್ ಸುನಾಮಿ ಎಚ್ಚರಿಕಾ ಕೇಂದ್ರ ತಿಳಿಸಿದೆ.

ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯದ ಪ್ರಕಾರ ಭೂಕಂಪನವು ಶನಿವಾರ ಬೆಳಗ್ಗೆ ಸುಮಾರು 3.25 ರ ಸುಮಾರಿನಲ್ಲಿ ಸಂಭವಿಸಿದೆ. ಈ ಭೂಕಂಪವನ್ನು ಅನುಸರಿಸಿ ಉಂಟಾದ  ಭೂಕಂಪನವು 3 ಅಂಕಗಳ ತೀವ್ರತೆಯಲ್ಲಿದ್ದು, ಕೆಲವೇ ನಿಮಿಷಗಳ ಬಳಿಕ ಉಂಟಾದ ಕಂಪನವು 5.2 ಅಂಕಗಳ ತೀವ್ರತೆಯಲ್ಲಿ ಇತ್ತು ಎಂದು ರಷ್ಯಾದ ವಿಜ್ಞಾನ ಅಕಾಡೆಮಿ ತನ್ನ ವೆಬ್‌ಸೈಟ್‌ನಲ್ಲಿ  ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com