ನೈಸ್ ಟ್ರಕ್ ದಾಳಿ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

ಫ್ರಾನ್ಸ್ ಕರಾವಳಿ ನಗರ ನೈಸ್ ನಲ್ಲಿ ಜನನಿಬಿಡ ಪ್ರದೇಶದಲ್ಲಿ ಟ್ರಕ್ ನುಗ್ಗಿಸಿ 84 ಜನರ ಹತ್ಯೆಗೆ ಕಾರಣವಾದ ದಾಳಿಯ ಹಿಂದೆ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಯೋಧ ಇದ್ದಾನೆ ಎಂದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಬಿರೂಟ್: ಫ್ರಾನ್ಸ್ ಕರಾವಳಿ ನಗರ ನೈಸ್ ನಲ್ಲಿ ಜನನಿಬಿಡ ಪ್ರದೇಶದಲ್ಲಿ ಟ್ರಕ್ ನುಗ್ಗಿಸಿ 84 ಜನರ ಹತ್ಯೆಗೆ ಕಾರಣವಾದ ದಾಳಿಯ ಹಿಂದೆ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಯೋಧ ಇದ್ದಾನೆ ಎಂದು ಐಸಿಸ್ ಒಡೆತನದ ಮಾಧ್ಯಮ ಹೇಳಿಕೊಂಡಿದೆ. 
"ಇಸ್ಲಾಮಿಕ್ ಸ್ಟೇಟ್ ವಿರುದ್ಧ ಹೋರಾಡುತ್ತಿರುವ ಮಿತ್ರಪಕ್ಷಗಳ ನಾಗರಿಕರ ಮೇಲೆ ದಾಳಿ ಮಾಡಿ ಎಂಬ ಕರೆಗೆ ಓಗೊಟ್ಟು ಈ ದಾಳಿ ನಡೆಸಲಾಗಿದೆ" ಎಂದು ಆಮಕ್ ನ್ಯೂಸ್ ಏಜೆನ್ಸಿ ಶನಿವಾರ ವರದಿ ಮಾಡಿದೆ. 
ಈ ಹೇಳಿಕೆ ದಾಳಿಕೋರನ ಹೆಸರನ್ನು ತಿಳಿಸಿಲ್ಲವಾದರೂ, ಭಯೋತ್ಪಾದಕ ಪ್ರತ್ಯೇಕವಾಗಿ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಬಿಂಬಿಸಲಾಗಿದೆ. ಆದರೆ ಜುಲೈ 14ರ ಈ ದಾಳಿಯನ್ನು ಇಸ್ಲಾಮಿಕ್ ಸ್ಟೇಟ್ ಸಂಸ್ಥೆಯೇ ಯೋಜಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳು ದೊರೆತಿಲ್ಲ. 
ಈ ದಾಳಿಯಲ್ಲಿ 84 ಜನ ಮೃತಪಟ್ಟು 200 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಟ್ರಕ್ ಚಾಲಕನನ್ನು ಮೊಹಮದ್ ಬೌಹ್ಲೇಲ್ ಎಂದು ಗುರುತಿಸಲಾಗಿದ್ದು, ಈ ಹಿಂದೆ ಇವನೊಬ್ಬ ಸಣ್ಣ ಅಪರಾಧಿಯಾಗಿದ್ದ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com