ಬೀಜಿಂಗ್: ಚೀನಾ ದೇಶಾದ್ಯಂತ ಕಳೆದ ಐದಾರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಪ್ರವಾಹ ಉಂಟಾಗಿ ಕನಿಷ್ಠ 154 ಮಂದಿ ಸಾವನ್ನಪ್ಪಿದ್ದು, 124 ಮಂದಿ ಕಣ್ಮರೆಯಾಗಿದ್ದಾರೆ. ಹೆಚ್ಚಿನ ಹಾನಿ ಚೀನಾದ ಉತ್ತರ ಭಾಗದಲ್ಲಿ ಆಗಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪ್ರವಾಹ ಉಂಟಾಗಬಹುದು ಎಂದು ನಮಗೆ ಮುನ್ನೆಚ್ಚರಿಕೆ ನೀಡಿರಲಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಮೊನ್ನೆ ಸೋಮವಾರದಿಂದಲೇ ಮಳೆ ಅವ್ಯಾಹತವಾಗಿ ಸುರಿಯುತ್ತಿದ್ದು, ಇದರಿಂದ ಪ್ರವಾಹ, ಭೂಕುಸಿತ ಮತ್ತು ಮನೆಗಳು ಹಾನಿಗೀಡಾಗಿವೆ. ಉತ್ತರ ಭಾಗದ ನಾಗರಿಕ ವ್ಯವಹಾರ ಇಲಾಖೆ, 114 ಮಂದಿ ಮೃತಪಟ್ಟಿದ್ದು, 111 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರದ ಹೆಬೈ ಭಾಗದಿಂದ 3 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ. ನಾಗರಿಕರಿಗೆ ತಾತ್ಕಾಲಿಕ ಟೆಂಟ್, ರಗ್ಗು, ರೈನ್ ಬೂಟ್ಸ್ ಮೊದಲಾದವುಗಳನ್ನು ಒದಗಿಸಲಾಗಿದೆ.