ಇಸ್ಲಾಮಾಬಾದ್: ಜಲ ಗಡಿ ಉಲ್ಲಂಘನೆ ಹಿನ್ನಲೆಯಲ್ಲಿ ಬಂಧಿತರಾಗಿದ್ದ ಭಾರತೀಯ ಮೂಲದ 18 ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆ ಮಾಡಿದೆ.
ಉತ್ತಮ ನಡವಳಿಕೆ ಹಿನ್ನಲೆಯಲ್ಲಿ 18 ಮೀನುಗಾರರನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಕರಾಚಿಯ ಲಂದಿ ಜೈಲಿನಲ್ಲಿದ್ದ 18 ಖೈದಿಗಳು ಸೋಮವಾರ ಲಾಹೋರ್ ಗೆ ಬಂದು ತಲುಪಲಿದ್ದಾರೆ. ಪಾಕಿಸ್ತಾನ ಅಧಿಕಾರಿಗಳು ಪಂಜಾಬ್ ನ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಒಪ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷ ಪಾಕಿಸ್ತಾನ 199 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದೆ ಎಂದು ವರದಿ ಹೇಳಿದೆ.