ಮುಂಚೂಣಿಯಲ್ಲಿ ಹಿಲರಿ ಕ್ಲಿಂಟನ್: ಮಿಸ್ಸಿಸ್ಸಿಪ್ಪಿಯಲ್ಲಿ ಗೆಲುವು

ಅಮೆರಿಕದ ಮಾಜಿ ಕಾರ್ಯದರ್ಶಿ, ಮುಂದಿನ ಅಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿ ಹಿಲರಿ ಕ್ಲಿಂಟನ್ ತಮ್ಮ ಎದುರಾಳಿ...
ಹಿಲರಿ ಕ್ಲಿಂಟನ್
ಹಿಲರಿ ಕ್ಲಿಂಟನ್
Updated on: 

ವಾಷಿಂಗ್ಟನ್: ಅಮೆರಿಕದ ಮಾಜಿ ಕಾರ್ಯದರ್ಶಿ, ಮುಂದಿನ ಅಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿ ಹಿಲರಿ ಕ್ಲಿಂಟನ್ ತಮ್ಮ ಎದುರಾಳಿ ವೆರ್ಮಂಟ್ ನ ಸೆನೆಟರ್ ಬೆರ್ನಿ ಸಂಡೆರ್ಸ್ ಅವರನ್ನು ಡೆಮಾಕ್ರಟಿಕ್ ಪಕ್ಷದಡಿ ಮಿಸ್ಸಿಸ್ಸಿಪ್ಪಿ ಕ್ಷೇತ್ರದಲ್ಲಿ ಸೋಲಿಸಿದ್ದಾರೆ.

ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಮತ ಎಣಿಕೆ ಮುಕ್ತಾಯಗೊಂಡಾಗ ಹಿಲರಿ ಕ್ಲಿಂಟನ್ ಅವರನ್ನು ಜಯಶಾಲಿ ಎಂದು ಘೋಷಿಸಲಾಯಿತು. ಸ್ಥಳೀಯ ನೀಗ್ರೋ ಜನಗಳು ಕ್ಲಿಂಟನ್ ಅವರಿಗೆ ಬೆಂಬಲ ನೀಡಿರುವುದರಿಂದ ಅವರಿಗೆ ಈ ಗೆಲುವು ಸಿಕ್ಕಿದೆ. 

ಇನ್ನೊಂದೆಡೆ ಮಿಚಿಗನ್ ನಲ್ಲಿ ನಡೆದ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಮತ್ತು ಬೆರ್ನಿ ಸಾಂಡರ್ಸ್ ಸಮ ಮತ ಪಡೆದಿದ್ದಾರೆ. ಇನ್ನೊಂದೆಡೆ ಡೊನಾಲ್ಡ್ ಟ್ರಂಪ್ ಅವರು ಮಿಚಿಗನ್ ಮತ್ತು ಮಿಸ್ಸಿಸ್ಸಿಪಿಯಲ್ಲಿ ಗೆಲುವು ಕಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com