62 ಪ್ರಯಾಣಿಕರಿದ್ದ ಈಜಿಪ್ಟ್ ಏರ್ ದೇಶೀಯ ವಿಮಾನ ಹೈಜಾಕ್

ಅಲೆಗ್ಸಾಂಡ್ರಿಯಾದಿಂದ ಈಜಿಪ್ಟ್ ರಾಜಧಾನಿ ಕೈರೋಗೆ ತೆರಳುತ್ತಿದ್ದ 62 ಮಂದಿ ಪ್ರಯಾಣಿಕರಿದ್ದ ಈಜಿಪ್ಟ್ ಏರ್ ದೇಶೀಯ ವಿಮಾನವನ್ನು ಹೈಜಾಕ್ ಮಾಡಲಾಗಿದೆ...
ಈಜಿಪ್ಟ್ ಏರ್
ಈಜಿಪ್ಟ್ ಏರ್
Updated on

ಕೈರೋ: ಅಲೆಗ್ಸಾಂಡ್ರಿಯಾದಿಂದ ಈಜಿಪ್ಟ್ ರಾಜಧಾನಿ ಕೈರೋಗೆ ತೆರಳುತ್ತಿದ್ದ ಈಜಿಪ್ಟ್ ಏರ್ ದೇಶೀಯ ವಿಮಾನವನ್ನು ಹೈಜಾಕ್ ಮಾಡಲಾಗಿದೆ.

ಅಲೆಂಗ್ಸಾಂಡ್ರಿಯಾದಿಂದ ಕೈರೋಗೆ ತೆರಳುತ್ತಿದ್ದ 7 ವಿಮಾನ ಸಿಬ್ಬಂದಿ ಸೇರಿ 55 ಪ್ರಯಾಣಿಕರಿದ್ದ ಈಜಿಪ್ಟ್ ಏರ್ ಎ320 ವಿಮಾನವನ್ನ ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 8 ಗಂಟೆಗೆ ಹೈಜಾಕ್ ಮಾಡಿರುವ ದುಷ್ಕರ್ಮಿಗಳು ವಿಮಾನವನ್ನು ಸೈಪ್ರಸ್ ನ ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ ಎಂದು ಏರ್‌ಲೈನ್ಸ್‌ನ ವಕ್ತಾರರು ಹೇಳಿದ್ದಾರೆ.

ವಿಮಾನ ಟೇಕಾಫ್ ಆದ ಒಂದು ಗಂಟೆಯೊಳಗೆ ದುಷ್ಕರ್ಮಿಗಳು ವಿಮಾನವನ್ನು ಹೈಜಾಕ್ ಮಾಡಿದ್ದು, ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ. ಸದ್ಯ ಬಾಂಬ್ ನಿಷ್ಕ್ರಿಯ ದಳ ಸೈಪ್ರಸ್ ಗೆ ತೆರಳಿದೆ.

ವಿಮಾನದಲ್ಲಿ ಓರ್ವ ಶಸ್ತ್ರಸರ್ಜಿತ ಅಪಹರಣಕಾರ ಸ್ಫೋಟಕ ಹೊಂದಿದ ಬೆಲ್ಟ್ ಧರಿಸಿದ್ದಾನೆ ಎಂದು ಶಂಕಿಸಲಾಗಿದೆ.

ವಿಮಾನವನ್ನು ಹೈಜಾಕ್ ಮಾಡಿದ ಅಪಹರಣಕಾರ 5 ವಿದೇಶಿಗರು ಹಾಗೂ ವಿಮಾನ ಸಿಬ್ಬಂದಿಯನ್ನು ಹೊರತುಪಡಿಸಿ ಉಳಿದವರನ್ನು ಬಿಡುಗಡೆ ಮಾಡಿದ್ದಾನೆ.

ವಿಮಾನವನ್ನು ಹೈಜಾಕ್ ಮಾಡಿದವನನ್ನು ಈಜಿಫ್ಟ್ ಮೂಲದ ಪಶು ವೈದ್ಯಕೀಯ ಪ್ರಾಧ್ಯಾಪಕ 27 ವರ್ಷದ ಇಬ್ರಾಹಿಂ ಸಮಾಯಿಸ್ ಎನ್ನಲಾಗಿದೆ. ಈತ ರಾಜಕೀಯ ಆಶ್ರಯದ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com