ಒಬಾಮಾರ ಒಳ್ಳೆಯ ಕೆಲಸವನ್ನು ಟ್ರಂಪ್ ಗೆ ನೀಡಬೇಡಿ: ಕ್ಲಿಂಟನ್

"ಬರಾಕ್ ಒಬಾಮಾ ಸೃಷ್ಟಿಸಿರುವ ಲೆಗಸಿ ಡೊನಾಲ್ಡ್ ಟ್ರಂಪ್ ಕೈಗೆ ಜಾರುವುದಕ್ಕೆ ನಾವು ಬಿಡಬಾರದು" ಎಂದು ಅಮೆರಿಕಾ ಅಧ್ಯಕ್ಷೀಯ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಮುಂಚೂಣಿ
ಹಿಲರಿ ಕ್ಲಿಂಟನ್
ಹಿಲರಿ ಕ್ಲಿಂಟನ್
Updated on: 

ವಾಶಿಂಗ್ಟನ್: "ಬರಾಕ್ ಒಬಾಮಾ ಸೃಷ್ಟಿಸಿರುವ ಲೆಗಸಿ ಡೊನಾಲ್ಡ್ ಟ್ರಂಪ್ ಕೈಗೆ ಜಾರುವುದಕ್ಕೆ ನಾವು ಬಿಡಬಾರದು" ಎಂದು ಅಮೆರಿಕಾ ಅಧ್ಯಕ್ಷೀಯ ಸ್ಥಾನದ ಡೆಮಾಕ್ರಟಿಕ್ ಪಕ್ಷದ ಮುಂಚೂಣಿ ಅಭ್ಯರ್ಥಿ ಹಿಲರಿ ಕ್ಲಿಂಟನ್ ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿ ಟ್ರಂಪ್ ವಿರುದ್ಧ ಮಾತನಾಡಿದ್ದಾರೆ.

"ದ್ವೇಷದ ಮಾತನ್ನಾಡುವವರ ಕೈಗೆ ದೇಶದ ಭರವಸೆ, ಕನಸುಗಳನ್ನು ನೀಡಿ ಅವುಗಳನ್ನು ಹಾಳುಗೆಡುವುದು ಬೇಡ"  ಎಂದು ಸೆನೆಟರ್ ಮತ್ತು ಅಮೆರಿಕಾದ ಮಾಜಿ ಕಾರ್ಯದರ್ಶಿ ಭಾನುವಾರ ರಾತ್ರಿ ಹೇಳಿದ್ದಾರೆ.

ಡೆಟ್ರಾಯ್ಟ್ ನ ತಮ್ಮ ಭಾಷಣದಲ್ಲಿ ಟ್ರಂಪ್ ಅವರ ದ್ವೇಷಪೂರಿತ ಭಾಷಣಗಳ ಮೇಲೆ ವಾಗ್ದಾಳಿ ನಡೆಸಿರುವ ಕ್ಲಿಂಟನ್ ಒಬಾಮಾ ಅವರ ಅಧ್ಯಕ್ಷೀಯ ಅವಧಿ ಕೊನೆಯಾಗುತ್ತಿರುವ ಸಮಯದಲ್ಲಿ ದೇಶವನ್ನು ಒಗ್ಗೂಡಿಸುವ ತುರ್ತು ಅವಶ್ಯಕತೆ ಇದೆ ಎಂದಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com