ಬೀಜಿಂಗ್ :ಚೀನಾದ ರೋಬೋಟ್ ವೊಂದು ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ಕಾಲೇಜು ಪ್ರವೇಶ ಪರೀಕ್ಷೆಯನ್ನು ಬರೆಯುವ ಮೂಲಕ 2017 ರ ಶೈಕ್ಷಣಿಕ ವರ್ಷ ದಲ್ಲಿ 12ನೇ ತರಗತಿಯನ್ನು ಪೂರ್ತಿಗೊಳಿಸಲಿದೆ. ಈ ಪ್ರವೇಶ ಪರೀಕ್ಷೆ ತೇರ್ಗಡೆಯಾಗಿ ಚೀನಾದ ಮೊದಲ ಶ್ರೇಣಿಯ ವಿಶ್ವವಿದ್ಯಾಲಯದಲ್ಲಿ ಸ್ಥಾನ ಗಳಿಸಲು ರೋಬೊಟ್ ಸಿದ್ಧವಾಗಿದೆ.
ಗಣಿತ, ಚೈನೀಸ್ ಭಾಷೆ ಮತ್ತು ಇತಿಹಾಸ, ರಾಜಕೀಯ ಮತ್ತು ಭೌಗೋಳಿಕ ವಿಷಯವನ್ನೊಳಗೊಂಡ ಸಮಗ್ರ ಪರೀಕ್ಷೆ ಬರೆಯಲು ಸಾಧ್ಯವಾಗುವಂತೆ ರೋಬೊಟನ್ನು ವಿನ್ಯಾಸಗೊಳಿಸಲಾಗಿದೆ ಎಂದು ಚೆಗಡುನಲ್ಲಿರುವ ಕೃತಕ ಬುದ್ಧಿಮತ್ತೆ ಕಂಪನಿಯೊಂದರ ಸಿಇ ಲಿನ್ ಹುಯಿ ಹೇಳಿದ್ದಾರೆ.
ಇತರೆ ವಿದ್ಯಾರ್ಥಿಗಳಂತೆ ರೋಬೋಟ್ ಸಹ ನಿಗದಿತ ಸಮಯದೊಳಗೆ ಪರೀಕ್ಷೆಯನ್ನು ಮುಗಿಸಲಿದೆ.
ಪರೀಕ್ಷೆ ಬರೆಯುವವರೆಗೂ ಈ ರೋಬೋಟ್‌ನಿಂದ ಅಂತರ್ಜಾಲ ಸಂಪರ್ಕ ಕಡಿತಗೊಳಿಸಲಾಗುವುದು ಮತ್ತು ಔಟ್ ಪುಟ್ ನ್ನು ಪ್ರಿಂಟರ್ ನಲ್ಲಿ ಪ್ರಿಂಟ್ ಮಾಡಲಾಗುವುದು
ಮೇಲ್ವಿಚಾರಕರು ಮತ್ತು ನೋಟರಿಯ ಮುಂದೆ ಕುಳಿತು ಈ ರೋಬೋಟ್ ಪರೀಕ್ಷೆ ಬರೆಯಲಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ