ಇರಾಕ್ ನಲ್ಲಿ ಐಎಸ್ ಈ ಹಿಂದೆ ವಶಪಡಿಸಿಕೊಂಡಿದ್ದ ಅರ್ಧದಷ್ಟು ಭಾಗ ಕಳೆದುಕೊಂಡಿದೆ: ಪೆಂಟಗನ್

ಇರಾಕ್ ಮತ್ತು ಸಿರಿಯಾದಲ್ಲಿ, ಅಮೇರಿಕಾ ಮಿತ್ರ ಪಕ್ಷಗಳ ದಾಳಿಯಿಂದ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಪೆಂಟಗನ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ವಾಶಿಂಗ್ಟನ್: ಇರಾಕ್ ಮತ್ತು ಸಿರಿಯಾದಲ್ಲಿ, ಅಮೇರಿಕಾ ಮಿತ್ರ ಪಕ್ಷಗಳ ದಾಳಿಯಿಂದ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಪೆಂಟಗನ್ ವಕ್ತಾರ ಇರಾಕ್ ನಲ್ಲಿ ಐ ಎಸ್ ಈ ಹಿಂದೆ ವಶಪಡಿಸಿಕೊಂಡಿದ್ದ ಅರ್ಧದಷ್ಟು ಭಾಗ ಕಳೆದುಕೊಂಡಿದೆ ಎಂದಿದ್ದಾರೆ.

ಇರಾಕ್ ನಲ್ಲಿ ಐ ಎಸ್ ಈ ಹಿಂದೆ ವಶಪಡಿಸಿಕೊಂಡಿದ್ದ 40% ಭಾಗವನ್ನು ಮತ್ತು ಸಿರಿಯಾದಲ್ಲಿ ಸುಮಾರು ೧೦% ಭಾಗವನ್ನು ಕಳೆದುಕೊಂಡಿದೆ ಎಂದು ಅಮೇರಿಕಾ ಭದ್ರತಾ ಇಲಾಖೆ ಮೊದಲು ತಿಳಿಸಿತ್ತು.

ದಿನಕಳೆದಂತೆ ಈಗ ಕಳೆದುಕೊಂಡಿರುವ ಭಾಗದ ಅನುಪಾತ ಹೆಚ್ಚಿದೆ ಎಂದು ಪೆಂಟಗನ್ ವಕ್ತಾರ ಪೀಟರ್ ಕುಕ್ ಹೇಳಿದ್ದಾರೆ.

"ಇರಾಕ್ ನಲ್ಲಿ ಸದ್ಯಕ್ಕೆ ಅವರು ಈ ಹಿಂದೆ ವಶಪಡಿಸಿಕೊಂಡಿದ್ದ ಸುಮಾರು ೪೫% ಭಾಗವನ್ನು ಕಳೆದುಕೊಂಡಿದ್ದಾರೆ" ಎಂದು ಕುಕ್ ತಿಳಿಸಿದ್ದಾರೆ. "ಸಿರಿಯಾದಲ್ಲಿ ಈ ಅನುಪಾತ ೧೬ರಿಂದ ೨೦% ಇದೆ" ಎಂದಿದ್ದಾರೆ.

ಇರಾಕ್ ನಲ್ಲಿ ಐ ಎಸ್ ರಾಮಡೀ ಮತ್ತು ಹಿತ್ ನಗರಗಳ ವಶವನ್ನು ಕಳೆದುಕೊಂಡಿದ್ದರೂ ಪ್ರಮುಖ ನಗರಗಳಾದ ಮೋಸುಲ್ ಮತ್ತು ಫಲ್ಲುಜಾ ಮೇಲೆ ಇನ್ನು ನಿಯಂತ್ರಣ ಹೊಂದಿದೆ.

ಸಿರಿಯಾದಲ್ಲಿ ಕ್ಯಾಲಿಫತ್ ನ ರಾಜಧಾನಿ ಎಂದು ಕರೆಯಲಾಗುವ ರಕ್ಕ ಇನ್ನೂ ಐ ಎಸ್ ನಿಯಂತ್ರಣದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com