ಪೋರ್ಕ್ ಸೂಪ್ ಸವಿಯಲು ವಿಯೆಟ್ನಾಮ್ ನ ರೆಸ್ಟೋರೆಂಟ್ ಗೆ ಒಬಾಮ ದಿಢೀರ್ ಭೇಟಿ; ದಂಗಾದ ಮಾಲೀಕ!

ವಿಯೆಟ್ನಾಮ್ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪಾರ್ಕ್ ಸೂಪ್ ಸವಿಯಲು ಅಲ್ಲಿನ ಹನೋಯಿ ರೆಸ್ಟೋರೆಂಟ್ ಗೆ ದಿಢೀರ್ ಭೇಟಿ ನೀಡಿ ರೆಸ್ಟೋರೆಂಟ್ ನ ಮಾಲಿಕರನ್ನು ಅಚ್ಚರಿಗೊಳಿಸಿದ್ದಾರೆ.
ಪೋರ್ಕ್ ಸೂಪ್ ಸವಿಯಲು ವಿಯೆಟ್ನಾಮ್ ನ ರೆಷ್ಟೋರೆಂಟ್ ಗೆ ಒಬಾಮ ದಿಢೀರ್ ಭೇಟಿ
ಪೋರ್ಕ್ ಸೂಪ್ ಸವಿಯಲು ವಿಯೆಟ್ನಾಮ್ ನ ರೆಷ್ಟೋರೆಂಟ್ ಗೆ ಒಬಾಮ ದಿಢೀರ್ ಭೇಟಿ
Updated on: 

ವಿಯೆಟ್ನಾಮ್: ವಿಯೆಟ್ನಾಮ್ ಪ್ರವಾಸ ಕೈಗೊಂಡಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಪಾರ್ಕ್ ಸೂಪ್ ಸವಿಯಲು ಅಲ್ಲಿನ ಹನೋಯಿ ರೆಸ್ಟೋರೆಂಟ್ ಗೆ ದಿಢೀರ್ ಭೇಟಿ ನೀಡಿ ರೆಷ್ಟೋರೆಂಟ್ ನ ಮಾಲಿಕರನ್ನು ಅಚ್ಚರಿಗೊಳಿಸಿದ್ದಾರೆ.

ವಿಶ್ವದ ವಿವಿಧ ಭಾಗಗಳಲ್ಲಿರುವ ಪಾಕಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಆಹಾರವನ್ನು ಪರಿಚಯಿಸುವ ಶೋ( ಕಾರ್ಯಕ್ರಮದ) ಮುಖ್ಯಸ್ಥ ಆಂಟನಿ ಬೌರ್ಡೇನ್ ಅವರೊಂದಿಗೆ ಬರಾಕ್ ಒಬಾಮ ವಿಯೆಟ್ನಾಂ ನ ಹನೋಯಿ ರೆಷ್ಟೋರೆಂಟ್ ಗೆ ಮೇ.23 ರ ರಾತ್ರಿ ಭೇಟಿ ನೀಡಿ ಪಾರ್ಕ್ . ರೆಸ್ಟೋರೆಂಟ್ ನ ಮಾಲಿಕರಿಗೆ ವಿಶ್ವದ ವಿವಿಧ ಬಗೆಯ ಆಹಾರಗಳನ್ನು ಪರಿಚಯಿಸುವ ಅಂತಾರಾಷ್ಟ್ರೀಯ ಕಾರ್ಯಕ್ರಮದ ಮುಖ್ಯಸ್ಥರು ಹಾಗೂ ಅವರ ತಂಡ ತಮ್ಮ ರೆಸ್ಟೋರೆಂಟ್ ಗೆ ಭೇಟಿ ನೀಡುತ್ತಿದೆ ಎಂಬುದು ತಿಳಿದಿತ್ತಾದರೂ ಒಬ್ಬ ವಿಶೇಷ ಅತಿಥಿಯನ್ನು ಕರೆತರುತ್ತಾರೆ ಎಂಬುದರ ಬಗ್ಗೆ ಸುಳಿವಿರಲಿಲ್ಲ.

ಬರಾಕ್ ಒಬಾಮ ರೆಸ್ಟೋರೆಂಟ್ ಗೆ ಭೇಟಿ ನೀಡುವುದಕ್ಕೂ ಮುನ್ನ ಅಮೆರಿಕದ ಭದ್ರತಾ ಅಧಿಕಾರಿಗಳು ರೆಸ್ಟೋರೆಂಟ್ ನ ಸುತ್ತಮುತ್ತಲ ಪ್ರದೇಶವನ್ನು ತೆರವುಗೊಳಿಸಿದ್ದರು. ಇನ್ನು ರೆಸ್ಟೋರೆಂಟ್ ನಲ್ಲಿದ್ದ ಜನರು ಅಮೆರಿಕ ಅಧ್ಯಕ್ಷರ ಡಿಢೀರ್ ಭೇಟಿಯಿಂದ ಅಚ್ಚರಿಗೊಂಡು ಮೊಬೈಲ್ ಗಳಲ್ಲಿ ಫೊಟೊ ಕ್ಲಿಕ್ಕಿಸಿದರು. ಒಬಾಮ ಅವರೊಂದಿಗೆ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದ ಆಂಟನಿ ಬೌರ್ಡೇನ್ ತಮ್ಮ ಹಾಗೂ ಒಬಾಮ ಅವರ ಫೋಟೊ ವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ ಡೇಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com