ಅಮೆರಿಕಾದಿಂದ ಉದ್ಯೋಗಗಳು ಕೈತಪ್ಪಿ ಭಾರತ, ಚೀನಾ ಪಾಲಾಗುತ್ತಿವೆ: ಟ್ರಂಪ್

ಭಾರತ, ಚೀನಾ, ಮೆಕ್ಸಿಕೋ ಮತ್ತು ಸಿಂಗಾಪುರದಂತಹ ರಾಷ್ಟ್ರಗಳಿಂದಾಗಿ ಅಮೆರಿಕಾದಿಂದ ಉದ್ಯೋಗಗಳು...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on: 
ವಾಷಿಂಗ್ಟನ್: ಭಾರತ, ಚೀನಾ, ಮೆಕ್ಸಿಕೋ ಮತ್ತು ಸಿಂಗಾಪುರದಂತಹ ರಾಷ್ಟ್ರಗಳಿಂದಾಗಿ ಅಮೆರಿಕಾದಿಂದ ಉದ್ಯೋಗಗಳು ಕೈ ತಪ್ಪಿ ಹೋಗುತ್ತಿವೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾ ವಿಶ್ವ ವ್ಯಾಪಾರ ಸಂಘಟನೆಗೆ ಪ್ರವೇಶಿಸಿದ್ದರಿಂದಾಗಿ ಸುಮಾರು 70 ಸಾವಿರ ಕೈಗಾರಿಕೆಗಳನ್ನು ಕಳೆದುಕೊಂಡಿದೆ. ಬಿಲ್ ಕ್ಲಿಂಟನ್ ಮತ್ತು ಹಿಲರಿ ಕ್ಲಿಂಟನ್ ಅವರ ಬೆಂಬಲಿತ ವಿಪತ್ತುಗಳು ಎದುರಾಗಿವೆ. ವಿಶ್ವದ ಇತಿಹಾಸದಲ್ಲಿ ನಮಗೆ ಅನೇಕ ಉದ್ಯೋಗಗಳು ಕೈತಪ್ಪಿ ಹೋಗಿವೆ. ನಮ್ಮಂತೆ ಯಾವ ರಾಷ್ಟ್ರಗಳೂ ಸಹ ಇಷ್ಟೊಂದು ಪ್ರಮಾಣದಲ್ಲಿ ಮೂರ್ಖತನದಿಂದ ಉದ್ಯೋಗಗಳನ್ನು ಕಳೆದುಕೊಂಡದಿಲ್ಲ ಎಂದು ಫ್ಲೋರಿಡಾದ ಟಂಪಾದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಗುಡ್ ರಿಚ್ ಲೈಟಿಂಗ್ ಸಿಸ್ಟಮ್ಸ್ 255 ಮಂದಿ ಕೆಲಸಗಾರರನ್ನು ವಜಾಗೊಳಿಸಿ ಭಾರತಕ್ಕೆ ತನ್ನ ಉದ್ಯೋಗವನ್ನು ವರ್ಗಾಯಿಸಿಕೊಂಡಿದೆ. ಬಾಕ್ಸ್ಟರ್ ಹೆಲ್ತ್ ಕೇರ್ ಕಾರ್ಪೊರೇಷನ್ 199 ಮಂದಿ ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕಿ ಸಿಂಗಾಪೂರಕ್ಕೆ ಕಂಪೆನಿಯನ್ನು ಶಿಫ್ಟ್ ಮಾಡಿಕೊಂಡಿದೆ. ಎಸ್ಸಿಲಾರ್ ಲ್ಯಾಬೊರೇಟರೀಸ್ 181 ಮಂದಿ ಕೆಲಸಗಾರರನ್ನು ತೆಗೆದುಹಾಕಿ ಮೆಕ್ಸಿಕೋದತ್ತ ಮುಖ ಮಾಡಿದೆ. ಅಮೆರಿಕಾದ ಪರಿಸ್ಥಿತಿ ಹದಗೆಡುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಭ್ರಷ್ಟ ಸರ್ಕಾರವನ್ನು ಕೊನೆಗಾಣಿಸಿ ವಿಶೇಷ ಆಸಕ್ತಿಯಿಂದ ದೇಶವನ್ನು ಮುನ್ನಡೆಸುವುದು ತಮ್ಮ ಗುರಿಯಾಗಿದೆ. ಅಮೆರಿಕಾದಿಂದ ಕಳೆದು ಹೋದ ಉದ್ಯೋಗಾವಕಾಶವನ್ನು ಮತ್ತೆ ತರುವುದು ಮೂರ್ಖ ಅಥವಾ ಭ್ರಷ್ಟ ರಾಜಕಾರಣಿಗಳಿಂದ ಉದ್ಯೋಗಗಳನ್ನು ಮರಳಿ ಪಡೆಯುವುದು ತಮ್ಮ ಗುರಿಯಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com