ಅಮೆರಿಕ-ಇಸ್ಲಾಮಿಕ್ ಸಂಬಂಧಗಳ ಪರಿಷತ್ ನಡೆಸಿದ್ದ ಸಮೀಕ್ಷೆ ಪ್ರಕಾರ 10 ಮುಸ್ಲಿಮರ ಪೈಕಿ 7 ಮುಸ್ಲಿಮರು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಗೆ ಮತಚಲಾಯಿಸುವುದಾಗಿ ತಿಳಿಸಿದ್ದರು. ಡೊನಾಲ್ಡ್ ಟ್ರಂಪ್ ಆಯ್ಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಿ ರಾಜಕೀಯ ವಿಶ್ಲೇಷಕ ಖಾಲಿದ್ " ನಮ್ಮ ಕೆಟ್ಟ ದುಃಸ್ವಪ್ನ ವಾಸ್ತವವಾಗಿದೆ. ಧರ್ಮಾಂಧತೆ, ಸ್ತ್ರೀದ್ವೇಷ, ಮತ್ತು ಮುಸ್ಲಿಮರ ದೂಷಣೆಗಳ ಮೇಲೆಯೇ ತನ್ನ ವೇದಿಕೆ ನಿರ್ಮಿಸಿಕೊಂಡಿದ್ದ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.