ಚೀನಾದಲ್ಲಿ ಪ್ರಬಲ ಭೂಕಂಪ; ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲು

ಚೀನಾದ ವಾಯುವ್ಯ ಗಡಿ ಭಾಗದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ.
ಗ್ಯೂಗಲ್ ಮ್ಯಾಪ್ ಚಿತ್ರ
ಗ್ಯೂಗಲ್ ಮ್ಯಾಪ್ ಚಿತ್ರ
Updated on: 

ಬೀಜಿಂಗ್: ಚೀನಾದ ವಾಯುವ್ಯ ಗಡಿ ಭಾಗದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ.

ಚೀನಾದ ವಾಯುವ್ಯ ಗಡಿಯಲ್ಲಿರುವ ಕ್ಸಿನ್ ಜಿಯಾಂಗ್ ಉಯ್ಗುರ್ ಪ್ರಾಂತ್ಯದ 150 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕದ ಭೂಕಂಪನ ಮಾಪನ ಕೇಂದ್ರ ತಿಳಿಸಿದೆ. ಇನ್ನು ಭೂಕಂಪನ  ತೀವ್ರತೆಗೆ ಕಿಝಿಲ್ಸು ಕಿರ್ಜಿಝ್ ಪ್ರಾಂತ್ಯದ ಸುಮಾರು 6ಕ್ಕೂ ಹೆಚ್ಚು ಮನೆಗಳು ಧರೆಗುರುಳಿದ್ದು, ಘಟನೆಯಲ್ಲಿ ಸ್ಥಳೀಯ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಉಳಿದ ಪ್ರದೇಶಗಳಿಂದ ಇದುವರೆಗೂ ಯಾವುದೇ ರೀತಿಯ ಸಾವುನೋವುಗಳಾದ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com