ಪಾಕ್ ನಲ್ಲಿ ಮತ್ತೆ ಉಗ್ರರ ದಾಳಿ: ಕನಿಷ್ಠ 12 ಸಾವು, 52 ಕ್ಕೂ ಹೆಚ್ಚು ಜನರಿಗೆ ಗಾಯ

ಪಾಕಿಸ್ತಾನದಲ್ಲಿ ಮತ್ತೆ ಉಗ್ರ ದಾಳಿ ನಡೆದಿದ್ದು ಕೋರ್ಟ್ ಆವರಣದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಕನಿಷ್ಠ 12 ಜನರು ಸಾವನ್ನಪ್ಪಿದ್ದು 52 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಪಾಕ್ ನಲ್ಲಿ ಮತ್ತೆ ಉಗ್ರರ ದಾಳಿ: ಕನಿಷ್ಠ 12 ಸಾವು, 52 ಕ್ಕೂ ಹೆಚ್ಚು ಜನರಿಗೆ ಗಾಯ
ಪಾಕ್ ನಲ್ಲಿ ಮತ್ತೆ ಉಗ್ರರ ದಾಳಿ: ಕನಿಷ್ಠ 12 ಸಾವು, 52 ಕ್ಕೂ ಹೆಚ್ಚು ಜನರಿಗೆ ಗಾಯ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೆ ಉಗ್ರ ದಾಳಿ ನಡೆದಿದ್ದು ಕೋರ್ಟ್ ಆವರಣದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಕನಿಷ್ಠ 12 ಜನರು ಸಾವನ್ನಪ್ಪಿದ್ದು 52 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಖೈಬರ್ ಪಕ್ತುನ್‌ಖ್ವಾ ಪ್ರಾಂತ್ಯದ ಸೆಷನ್ಸ್ ಕೋರ್ಟ್ ನಲ್ಲಿ ಭಯೋತ್ಪಾದಕನ ಆತ್ಮಾಹುತಿ ದಾಳಿ ನಡೆದಿದ್ದು, ಜಮಾತ್-ಉಲ್- ಅಹ್ರಾರ್( ಜೆಎ) ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿದೆ. ಪಾಕಿಸ್ತಾನ ಪೇಷಾವರದಲ್ಲಿ ಕ್ರಿಶ್ಚಿಯನ್ ಕಾಲೋನಿಯನ್ನು ಬಂದೂಕುಧಾರಿಯೊಬ್ಬ ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಕೋರ್ಟ್ ನಲ್ಲಿ ಆತ್ಮಾಹುತಿ ದಾಳಿ ನಡೆದಿದೆ.

ಕ್ರಿಶ್ಚಿಯನ್ ಕಾಲೋನಿಯ ಮೇಲೆ ನಡೆದ ದಾಳಿಯ ಹೊಣೆಗಾರಿಕೆಯನ್ನೂ ಜಮಾತ್-ಉಲ್- ಅಹ್ರಾರ್ ಉಗ್ರ ಸಂಘಟನೆ ಹೊತ್ತಿದ್ದು, ಓರ್ವ ನಾಗರಿಕ ಹಾಗೂ ನಾಲ್ವರು ಆತ್ಮಾಹುತಿ ಭಯೋತ್ಪಾದಕರು ಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ ನಡೆದಿರುವ ದಾಳಿಯಲ್ಲಿ ಲಾಯರ್ ಗಳನ್ನು ಗುರಿಯಾಗಿರಿಸಿಕೊಂಡಿರುವುದು ಸ್ಪಷ್ಟವಾಗಿದೆ. ಇದೆ ಮಾದರಿಯಲ್ಲಿ ಕಳೆದ ತಿಂಗಳು ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದ ಕ್ವೆಟ್ಟಾದಲ್ಲಿಯೂ ಆತ್ಮಾಹುತಿ ದಾಳಿ ನಡೆಸಿ 73 ಜನರನ್ನು ಹತ್ಯೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com