ಈಜಿಪ್ಟ್: ಅಕ್ರಮ ವಲಸಿಗರಿದ್ದ ನೌಕೆ ಮುಳುಗಿ 42 ಮಂದಿ ಜಲಸಮಾಧಿ

ಅಕ್ರಮ ವಲಸಿಗರ ನೌಕೆಯೊಂದು ಈಜಿಪ್ಟ್ ಕರಾವಳಿಯಲ್ಲಿ ಮುಳುಗಿದ್ದರಿಂದ 42 ಮಂದಿ ವಲಸಿಗರು ಮೃತಪಟ್ಟಿದ್ದಾರೆ...
ಅಕ್ರಮ ವಲಸಿಗರ ನೌಕೆ(ಸಂಗ್ರಹ ಚಿತ್ರ)
ಅಕ್ರಮ ವಲಸಿಗರ ನೌಕೆ(ಸಂಗ್ರಹ ಚಿತ್ರ)
Updated on: 
ಕೈರೋ: ಅಕ್ರಮ ವಲಸಿಗರ ನೌಕೆಯೊಂದು ಈಜಿಪ್ಟ್ ಕರಾವಳಿಯಲ್ಲಿ ಮುಳುಗಿದ್ದರಿಂದ 42 ಮಂದಿ ವಲಸಿಗರು ಮೃತಪಟ್ಟಿದ್ದಾರೆ. 
600 ವಲಸಿಗರಿದ್ದ ನೌಕೆ ಈಜಿಪ್ಟ್ ನ ಕಾಫಿರ್-ಅಲ್-ಶೇಕ್ ಕರಾವಳಿಯಲ್ಲಿ ಮುಳುಗಿದೆ. ಈ ದುರ್ಘಟನೆಯಲ್ಲಿ 42 ಮಂದಿ ಸಾವನ್ನಪ್ಪಿದ್ದರೆ, 150ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನು ಅನೇಕರು ನಾಪತ್ತೆಯಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 
ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಜನರು ನೌಕೆಯಲ್ಲಿ ತುಂಬಿದ್ದರಿಂದ ಈ ದುರಂತ ಸಂಭವಿಸಿದೆ. ಇನ್ನು ರಕ್ಷಣಾ ತಂಡ 150ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದು ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಕೈಗೊಂಡಿದೆ. 
ಈ ನೌಕೆಯಲ್ಲಿ ಈಜಿಪ್ಟ್, ಸಿರಿಯಾ ಮತ್ತು ಆಫ್ರಿಕಾದ ಅಕ್ರಮ ವಲಸಿಗರಿದ್ದರು. ಕಾಫಿರ್-ಅಲ್-ಶೇಕ್ ಕರಾವಳಿ ಪ್ರದೇಶದಲ್ಲಿ ದೋಣಿಗಳಲ್ಲಿ ಅಕ್ರಮ ವಲಸಿಗರನ್ನು ಸಾಗಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು ದುರಂತಗಳಿಗೆ ಕಾರಣವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com