ಪಾಕಿಸ್ತಾನದಲ್ಲಿ ಬೇಹುಗಾರಿಕೆ: ಶಂಕಿತ ಗೂಢಚಾರಕ ಕುಲ್‌ ಭೂಷಣ್‌ ಜಾದವ್‌ ಗೆ ಗಲ್ಲು ಶಿಕ್ಷೆ ಪ್ರಕಟ

ಪಾಕಿಸ್ತಾನದಲ್ಲಿ ಭಾರತದ ಪರ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದ ಕುಲ್‌ಭೂಷಣ್‌ ಜಾದವ್‌ ಗೆ ಗಲ್ಲು ಶಿಕ್ಷೆ ನೀಡಿರುವುದನ್ನು ಏ.10 ರಂದು ಘೋಷಿಸಲಾಗಿದೆ.
ಕುಲ್‌ಭೂಷಣ್‌ ಜಾದವ್‌
ಕುಲ್‌ಭೂಷಣ್‌ ಜಾದವ್‌
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರತದ ಪರ ಬೇಹುಗಾರಿಕೆ ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದ ಕುಲ್‌ಭೂಷಣ್‌ ಜಾದವ್‌ ಗೆ ಗಲ್ಲು ಶಿಕ್ಷೆ ನೀಡಿರುವುದನ್ನು ಏ.10 ರಂದು ಘೋಷಿಸಲಾಗಿದೆ. 
ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಕುಲ್‌ ಭೂಷಣ್‌ ಜಾದವ್‌ ಗೆ ಗಲ್ಲು ಶಿಕ್ಷೆ ವಿಧಿಸಿದ್ದು, ಗಲ್ಲು ಶಿಕ್ಷೆ ಪ್ರಕಟವಾಗಿರುವುದನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜಾವೇದ್ ಬಾಜ್ವಾ ಸ್ಪಷ್ಟಪಡಿಸಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ ಪಿಆರ್) ಹೇಳಿದೆ. 
ಭಾರತದ ಪರ ಬೇಹುಗಾರಿಕೆ ನಡೆಸಿ, ಆಂತರಿಕ ಅಸ್ಥಿರತೆ ಉಂಟು ಮಾಡುತ್ತಿರುವ ಆರೋಪದಡಿ ಭೂಷಣ್‌ ಜಾದವ್‌ ನ್ನು 2016 ಮಾ.3 ರಂದು ಬಲೂಚಿಸ್ಥಾನದಲ್ಲಿ ಬಂಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com